ನಡೆದುಬಂದ ದಾರಿ

ಪುನರ್ಚಿತ್ (ಪುನರ್ ಆಲೋಚನೆ) ಪರ್ಯಾಯ ದೃಷ್ಟಿಕೋನಗಳ ಮೌಲ್ಯಮಾಪನದ ಜೊತೆ ಶಿಕ್ಷಣ, ಪರಿಸರ, ಪ್ರಜಾಪ್ರಭುತ್ವ ಮತ್ತು ಸಮಾಜವನ್ನು ಕುರಿತ ಚಟುವಟಿಕೆಗಳನ್ನು ಒಳಗೊಂಡು ಸಾಮೂಹಿಕವಾಗಿ ಕೆಲಸ ಮಾಡುತ್ತಿದೆ. ಪುನರ್ಚಿತ್ ಸಮಾನ ಹಾಗೂ ನ್ಯಾಯಬದ್ಧ ಸಮಾಜವನ್ನು ರೂಪಿಸುವ ದಿಕ್ಕಿನಲ್ಲಿ ಕೆಲಸ ಮಾಡುವ ಉದ್ದೇಶವನ್ನು ಒಳಗೊಂಡಿದೆ. ಗ್ರಾಮೀಣ ಭಾರತದ ಪ್ರತಿನಿತ್ಯ ಜೀವನಕ್ಕೆ ಸರಿಹೊಂದುವ ಆಲೋಚನೆಗಳಿಗೆ ಅಸ್ತಿಭಾರದ ಮುನ್ನುಡಿ ಬರೆಯುತ್ತದೆ.
ಪುನರ್ಚಿತ್ ಕಲಿಕಾ ಕೇಂದ್ರವು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ನಾಗವಳ್ಳಿ ಗ್ರಾಮದಲ್ಲಿದೆ (ಮೈಸೂರು ನಗರದಿಂದ ೭೨ ಕಿ.ಮೀ). ಪುನರ್ಚಿತ್ ತಂಡ ಗ್ರಾಮೀಣ ಯುವಜನರಿಗಾಗಿ ಹಲವು ತರಬೇತಿ ಕಾರ್ಯಾಗಾರಗಳನ್ನು ಆಯೋಜನೆ ಮಾಡುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಪ್ರವೃತ್ತಿ/ಒಲವು ಕುರಿತ ಕ್ರಿಯಾ ಸಂಶೋಧನೆಯನ್ನು ಮಾಡುತ್ತದೆ. ಪ್ರಾಯೋಗಿಕವಾಗಿ ಸಮಗ್ರ ಕಲಿಕಾ ಕಾರ್ಯಕ್ರಮ ವಿಸ್ತರಣೆ (ಔಟ್‌ರೀಚ್) ಮತ್ತು ಶಿಕ್ಷಣ ಕುರಿತ ಚಟುವಟಿಕೆಗಳ ವಕಾಲತ್ತು (ಅಡ್ವಕೆಸಿ) ವಹಿಸುತ್ತದೆ. ಪುನರ್ಚಿತ್ ತಂಡವು ಶೈಕ್ಷಣಿಕವಾಗಿ ತೊಡಗಿಸಿಕೊಂಡಿದ್ದು ಕೃಷಿ, ಗ್ರಾಮೀಣ ಕಲ್ಯಾಣ, ಸಾಮಾಜಿಕ ಒಲವು ಮತ್ತು ಪ್ರಜಾಪ್ರಭುತ್ವದ ವಿಷಯಗಳನ್ನು ಬೋಧಿಸುತ್ತಾರೆ.
ಮಕ್ಕಳು ಮತ್ತು ಮಹಿಳೆಯರು ಮತ್ತು ರೈತರಿಗಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ. ಹೆಚ್ಚುವರಿಯಾಗಿ ಶಿಕ್ಷಣ/ಕಲಿಕೆಯ ಪರ್ಯಾಯ ಮಾದರಿಗಳು, ಕೃಷಿ ಮತ್ತು ಪರಿಸರ, ನಿರ್ಮಾಣ/ವಾಸ್ತಶಿಲ್ಪ, ಆರೋಗ್ಯ ಮತ್ತಿತರೆ ವಿಷಯಗಳ ಯೋಜನೆ ಮತ್ತು ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಪ್ರಸ್ತುತ ತಂಡಕ್ಕೆ ಎದುರಾಗಿರುವ ಮುಖ್ಯ ಸವಾಲುಗಳೆಂದರೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ, ಭೂಮಿ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆ, ಕ್ರಿಯಾಶೀಲ ಪೌರತ್ವ, ಪರ್ಯಾಯ ಜೀವನೋಪಾಯ ಮತ್ತು ಗ್ರಾಮೀಣ ಯುವಜನರ ಸಾಮೂಹಿಕ ಜವಾಬ್ದಾರಿ ನಿರ್ವಹಣೆ ತಿಳಿಸುವುದು ಸವಾಲಾಗಿದೆ.