ಕಲಿಕೆ ಮತ್ತು ಸಂಪನ್ಮೂಲ ಕೇಂದ್ರ

ನಾಗವಳ್ಳಿ ಗ್ರಾಮ (ಮೈಸೂರಿನಿಂದ ೭೨ ಕಿ.ಮೀ.)

ಸಂಪನ್ಮೂಲ ಮತ್ತು ಕಲಿಕಾ ಕೇಂದ್ರ – ನಾಗವಳ್ಳಿ ಗ್ರಾಮದಲ್ಲಿ ಒಂದು ಸಣ್ಣ ಸಂಪನ್ಮೂಲ ಮತ್ತು ಕಲಿಕಾ ಕೇಂದ್ರ ಪ್ರಾರಂಭಿಸಲಾಗಿದೆ. ಈ ಕೇಂದ್ರದಲ್ಲಿ ಮಕ್ಕಳು ಮತ್ತು ಯುವಜನರಿಗೆ ಸೃಜನಶೀಲ ಕಲೆಗಳನ್ನು ಕಲಿಸುವ ಪುಸ್ತಕಗಳು ಲಭ್ಯವಿದೆ. ಈ ಕೇಂದ್ರದ ಕೈತೋಟವು ವಿವಿಧ ತರಕಾರಿಗಳು, ಹಣ್ಣುಗಳನ್ನು ಬೆಳೆಯುವ ಮತ್ತು ಔಷಧಿ ಸಸ್ಯಗಳ ಪ್ರಾತ್ಯಕ್ಷಿಕೆಯನ್ನು ಒಳಗೊಂಡಿದೆ. ಇದರ ಜೊತೆಗೆ ಮಳೆ ನೀರು ಸಂಗ್ರಹ ಮತ್ತು ಬಳಕೆ, ಹಸಿರೆಲೆ ಗೊಬ್ಬರ (ಕಾಂಪೋಸ್ಟ್), ರೋಗಪೀಡೆಯನ್ನು ನಿಯಂತ್ರಿಸಿ, ಸಸ್ಯೆಗಳಿಗೆ ಪೋಷಕಾಂಶಗಳನ್ನು ನೀಡುವಂತಹ ಪಂಚಗವ್ಯ ಪ್ರಾತ್ಯಕ್ಷಿಕೆ ಇದೆ. ಈ ಕೇಂದ್ರವು ಸಮಗ್ರ ಕಲಿಕಾ ಕಾರ್ಯಕ್ರಮದ ತರಗತಿ ಮತ್ತು ಕಲಿಕಾ ಕೇಂದ್ರವೂ ಆಗಿದೆ. ಕರ್ನಾಟಕದ ಬೇರೆ ಬೇರೆ ಪ್ರದೇಶಗಳ ಮತ್ತು ಜಿಲ್ಲೆಯ ಯುವಜನರಿಗಾಗಿ (ಯುವಚೇತನ) ವರ್ಷದಲ್ಲಿ ಕೆಲವು ದಿನಗಳು ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಕಲಿಕಾ ಕೇಂದ್ರದಲ್ಲಿ ಒಂದು ಸಣ್ಣ ಬೀಜ ಕೇಂದ್ರವನ್ನು ಆರಂಭಿಸಿದೆ. ಇದರ ಅಭಿವೃದ್ಧಿಗೆ ವನಸ್ತ್ರೀ ನೆರವು ನೀಡುತ್ತಿದೆ.