ಧರ್ಮದರ್ಶಿಗಳು

ಡಾ.ನಾಗಾರ್ಜುನ್

ಡಾ.ನಾಗಾರ್ಜುನ್

ಧರ್ಮದರ್ಶಿಗಳು

ಡಾ. ನಾಗಾರ್ಜುನ್ ಅವರು ಚಾಮರಾಜನಗರ ಪಟ್ಟಣದಲ್ಲಿ ಸಾಮಾನ್ಯ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ವೈದ್ಯಕೀಯ ಸೇವೆಯ ಜೊತೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಕಬ್ಲನ್ ಸಕ್ರಿಯಾ ಸದಸ್ಯರಾಗಿದ್ದಾರೆ. ಅವರು ಹಲವಾರು ಸಂಸ್ಥೆಗಳು ಮತ್ತು ಗುಂಪುಗಳಿಗೆ ತಮ್ಮ ನಿಸ್ವಾರ್ಥ ಸೇವೆಯನ್ನು ಒದಗಿಸುವ ಮೂಲಕ ಕೆಲಸದಲ್ಲಿ ಖುಷಿಯಾಗಿದ್ದಾರೆ.

ಸುನೀತಾ ರಾವ್

ಸುನೀತಾ ರಾವ್

ಧರ್ಮದರ್ಶಿಗಳು

ಸುನೀತಾ ರಾವ್ ಅವರು ಪರಿಸರ ಶಾಸ್ತ್ರಜ್ಞರಾಗಿದ್ದು, ಕಳೆದ ಮೂವತ್ತು ವರ್ಷಗಳಿಂದ ಸಂರಕ್ಷಣಾ ಶಿಕ್ಷಣ ಮತ್ತು ಸಣ್ಣ ಪ್ರಮಾಣದ ಆಹಾರ ವ್ಯವಸ್ಥೆಗಳಲ್ಲಿ ಕೆಲಸ ಮಾಡಲು ತಮ್ಮ ಕೌಶಲ್ಯ ಬಳಸಿದ್ದಾರೆ. ಅವರು ೨೦೦೧ ರಲ್ಲಿ ಸಿರ್ಸಿಯಲ್ಲಿ ವಾಸವಾಗಿದ್ದು, ವನಸ್ರೀ ಎಂಬ ಮಹಿಳಾ ರೈತರ ಬೀಜ ಸಮೂಹವನ್ನು ಸ್ಥಾಪಿಸಿದರು. ಈ ಗುಂಪಿನ ಮುಖ್ಯ ಗಮನವು ಅರಣ್ಯ ಮನೆ ಮತ್ತು ಕೈ ತೋಟಗಳನ್ನು ನೋಡಿಕೊಳ್ಳುವ ಮಹಿಳೆಯರ ಪಾತ್ರವನ್ನು ಅನುಮೋದಿಸುತ್ತದೆ. ಹೆಚ್ಚು ಸ್ಥಳೀಯ ವೈವಿಧ್ಯಮಯ ಆಹಾರಗಳನ್ನು ಪ್ರತಿನಿಧಿಸುತ್ತದೆ. ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ಮೇಳಾಗಳ ಮೂಲಕ ಸಾಂಪ್ರದಾಯಿಕ ಬೀಜ ಸಂರಕ್ಷಣೆ, ಬೀಜ ಸಂಗ್ರಹ (ಉಳಿತಾಯ) ಮತ್ತು ವಿನಿಮಯ ಮಾಡಿಕೊಳ್ಳುತ್ತಾರೆ. ಸಣ್ಣ ಪ್ರಮಾಣದಲ್ಲಿ ಮೌಲ್ಯವರ್ಧನೆ ಮಾಡಿ, ಮಾರಾಟ ಕೂಡ ಮಾಡುತ್ತಾರೆ. ಸುನೀತಾ ರಾವ್ ಅವರು ಆರಂಭದಿಂದಲ್ಲೂ ಪುನರ್ಚಿತ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

 ಸಿ ಬಾಲಚಂದ್ರನ್

ಸಿ ಬಾಲಚಂದ್ರನ್

ಧರ್ಮದರ್ಶಿಗಳು

ಸಿ. ಬಾಲಚಂದ್ರನ್ ಅವರು ೧೯೭೦ ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಅವರು ಚೆನೈನ ಅಣ್ಣಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್ ನಿಂದ ೧೯೯೩ ರಲ್ಲಿ ಆರ್ಕಿಟೆಕ್ಚರ್ ಪದವಿ ಪಡೆದರು. ನವ ದೆಹಲಿಯ ನಿಜಾಮುದ್ದೀನ್ ಕಟ್ಟಡ ಕೇಂದ್ರದಲ್ಲಿ ಸೂಕ್ತವಾದ ನಿರ್ಮಾಣ ತಂತ್ರಜ್ಞಾನಗಳ ಕುರಿತು ವಾಸ್ತುಶಿಲ್ಪಿ ಶ್ರೀ ಅನಿಲ್ ಲಾಲ್ ಅವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದರು. ೧೯೯೯ ರವರೆಗೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಆಗ್ನೇಯ ಏಷ್ಯಾದ ದೇಶಗಳಲ್ಲಿ ಕೈಗಾರಿಕಾ ವಾಸ್ತುಶಿಲ್ಪವನ್ನು ಅಭ್ಯಾಸ ಮಾಡಿದ್ದಾರೆ. ಬೆಂಗಳೂರಿನ ಉತ್ತರ ಅಮೇರಿಕದ ಟೆಲಿಕಾಂ ಉದ್ಯಮದಲ್ಲಿ ಐಟಿ ಏಕೀಕರಣ ಯೋಜನೆಗಳ ವಿತರಣೆಯನ್ನು ನಿರ್ವಹಿಸುವ ಆಕ್ಸೆಂಚರ್‌ನಂತಹ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.
ಈ ಎಲ್ಲಾ ಅನುಭವಗಳು ಒಂದು ಪರಿಕಲ್ಪನೆಯಾಗಿ ಬೆಳೆದು ಸುಸ್ಥಿರತೆ ಕಡೆಗೆ ಅವರ ಉತ್ಸಾಹವನ್ನು ಅಭಿವೃದ್ಧಿಪಡಿಸಿದೆ. ವಸ್ತುಗಳ ಪುನರ್ ಬಳಕೆ ಮತ್ತು ಸರಳತೆ ಬಗ್ಗೆ ಆದ್ಯತೆ ನೀಡುತ್ತಾರೆ. ಮೈಸೂರಿನಲ್ಲಿ ಪ್ರಕೃತಿ ಮೂಲಕ ಸಾವಯವ ಉತ್ಪನ್ನಗಳ ಮಾರಾಟದ ಮಾಡುತ್ತಿದ್ದು, ಸ್ಥಳೀಯ ಆಹಾರ ಬಳಕೆ , ಕೈ ಉತ್ಪನ್ನಗಳಗಳಿಗೆ ಮುಖ್ಯತೆ ನೀಡಿ ಉತ್ತೇಜನ ಕೊಡುತ್ತಾರೆ. ಸ್ಥಳೀಯ ಸಂಪನ್ಮೂಲಗಳು ಮತ್ತು ಸರಳ ವಿಧಾನಗಳನ್ನು ಬಳಸಿಕೊಂಡು ನಿರ್ಮಾಣ ಮಾಡುವ ಯೋಜನೆಗಳ ನಿರ್ವಹಣೆ ಮಾಡಿದ್ದಾರೆ. ಪ್ರಾಥಮಿಕವಾಗಿ ಬಿದಿರು ಮತ್ತು ಮಣ್ಣು ಬಳಸಿ ನಿರ್ಮಾಣ ಮಾಡುವ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮುದಾಯ ವಾಸ್ತುಶಿಲ್ಪಿಯಾಗಿ ಸಾಮಾಜಿಕ ಅಗತ್ಯತೆ ಮತ್ತು ಪರಿಸರದ ಸಂದರ್ಭವನ್ನು ವಿನ್ಯಾಸದಲ್ಲಿ ಸಂಯೋಜಿಸಲು ಮತ್ತು ಯೋಜನೆಗಳ ಅನುಷ್ಠಾನದ ಸಮಯದಲ್ಲಿ ಸೂಕ್ತವಾದ ತಂತ್ರಜ್ಞಾನ ಬಳಸಲು ಒಲವು ತೋರುತ್ತಾರೆ.

ಎ.ಆರ್.ವಾಸವಿ

ಎ.ಆರ್.ವಾಸವಿ

ಧರ್ಮದರ್ಶಿಗಳು

ಎ.ಆರ್.ವಾಸವಿ : ಸಾಮಾಜಿಕ ಮಾನವಶಾಸ್ತ್ರಜ್ಞೆ. ಇವರು ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಸಮಾಜಶಾಸ್ತ್ರ ವಿಭಾಗದಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆದಿದ್ದಾರೆ. ಅಮೆರಿಕಾದ ಮೆಚಿಗನ್ ಸ್ಟೇಟ್ ಯುನಿರ್ವಸಿಟಿಯಿಂದ ಸಾಮಾಜಿಕ ಮಾನವಶಾಸ್ತ್ರದಲ್ಲಿ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಪಡೆದಿದ್ದಾರೆ. ಇವರು ಟಪ್ಟ್ಸ್ ಯುನಿರ್ವಸಿಟಿಯಲ್ಲಿ (ಮಾಸ್, ಅಮೆರಿಕಾ) ಸಂದರ್ಶಕ ಪ್ರಾಧ್ಯಾಪಕರು ಮ್ತತು ಅಹಮದಬಾದ್‌ನ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌ನಲ್ಲಿ ಬೋಧಕರಾಗಿದ್ದಾರೆ( ಫ್ಯಾಕಲ್ಟಿ). ವಿಶ್ವದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸವನ್ನು ನೀಡಿದ್ದಾರೆ. ಇವರು ಬೆಂಗಳೂರಿನ ನ್ಯಾಷಿನಲ್ ಇನಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್‌ನ ಸಮಾಜ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದು, ಸ್ವಯಂ ನಿವೃತ್ತಿ ಪಡೆದಿದ್ದಾರೆ.ಇವರು ಪುನರ್ಚಿತ್ ಸಂಸ್ಥೆಯ ಸ್ಥಾಪಕರಾಗಿದ್ದು, ಪ್ರಸ್ತುತ ಕಾರ್ಯದರ್ಶಿಗಳಾಗಿದ್ದಾರೆ. ಅವರ ಆಸಕ್ತಿ ಕ್ಷೇತ್ರಗಳು ಪರ್ಯಾಯ ಶಿಕ್ಷಣ, ಗ್ರಾಮೀಣ ಮತ್ತು ಕೃಷಿ ಅಧ್ಯಯನಗಳು, ಶಿಕ್ಷಣ ಸಮಾಜಶಾಸ್ತ್ರ, ಭಾರತೀಯ ಸಮಾಜಶಾಸ್ತ್ರ ಮತ್ತು ಪ್ರಸ್ತುತದ ಸಾಮಾಜಿಕ ಸಿದ್ಧಾಂತದ ವಿಷಯಗಳು.

ಆಯ್ದ ಪ್ರಕಟಣೆಗಳು
(ಪುಸ್ತಕ ಪ್ರಕಟಣೆಗಳ ವಿವರಕ್ಕಾಗಿ ಲಿಂಕ್ ಮತ್ತು ಪಿಡಿಎಫ್ ನೋಡಿ)

The Absent Agriculturist in International Affairs | Engish PDF
Societies in motion | Engish PDF
Re-imagining education | Engish PDF
‘Social Transformative Learning’ In India | Engish PDF | Kannada PDF
Suicides and the making of India’s agrarian distress | Engish PDF
‘The education question’ from the perspective of adivasis: conditions, policies and structures | Engish PDF