ಹೊನ್ನೇರು

ಗ್ರಾಮೀಣ ಯುವಜನ ಒಕ್ಕೂಟ

ಸಮಗ್ರ ಕಲಿಕಾ ಕಾರ್ಯಕ್ರಮದ ತರಬೇತಿಯನ್ನು ಪಡೆದ ಹಳೆಯ ಸದಸ್ಯರು ಸಂಪರ್ಕ ಜಾಲದ ಮೂಲಕ ಸಂಘಟನೆಯಾಗಿದ್ದಾರೆ. ಸಹಕಾರ ಮಾದರಿಯಲ್ಲಿ ಉತ್ಪನ್ನಗಳಿಗೆ ನೆರವು ಒದಗಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಜೊತೆಗೆ ವ್ಯವಸಾಯ ಕ್ಷೇತ್ರದಲ್ಲಿ ಪರಸ್ಪರ ಕೆಲಸಗಳಲ್ಲಿ ನೆರವಾಗುವುದು (ಮುಯ್ಯಿ ಆಳು ಮತ್ತು ಬೀಜ ಹಂಚಿಕೆ). ತಮ್ಮಲ್ಲಿ ಬೆಳೆದ ವ್ಯವಾಸಯ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವುದು.

ಕೆಲವರು ಬಟ್ಟೆ ಬ್ಯಾಗುಗಳನ್ನು ಸಿದ್ಧಪಡಿಸುವುದು ಮತ್ತು ಕೈಯಿಂದ ಮಾಡಿದ ಸೋಪುಗಳನ್ನು ಒಕ್ಕೂಟದ ಮೂಲಕ ಮಾರಾಟ ಮಾಡುತ್ತಾರೆ. ಸಾವಯವ ಉತ್ಪನ್ನಗಳನ್ನು ಮೈಸೂರು ಮತ್ತು ಬೆಂಗಳೂರಿಗೆ ಮಾರಾಟ ಮಾಡಲಾಗುತ್ತದೆ.ಭವಿಷ್ಯದಲ್ಲಿ ಪೂರ್ಣ ಪ್ರಮಾಣದ ಉತ್ಪಾದನ ಘಟಕ ಅಭಿವೃದ್ಧಿಪಡಿಸಿ ಅದನ್ನು ರೈತ ಉತ್ಪಾದಕ ಸಂಘಟನೆ ಅಥವಾ ಸಹಾಕಾರಿ ಮಾದರಿಯಲ್ಲಿ ಮುನ್ನಡೆಸುವುದು. ಪೂರ್ಣ ಸ್ವಚ್ಛಗೊಳಿಸಿದ ಆಯ್ಕೆ ಮಾಡಿದ ಕಾಳುಗಳು, ಸಿರಿಧಾನ್ಯಗಳು, ತರಕಾರಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಒಳಗೊಂಡಿರುತ್ತದೆ. ಪ್ರಸ್ತುತ ಒಕ್ಕೂಟದ ಸದಸ್ಯರು ಕೃಷಿಯನ್ನು ಮಾಡಿಕೊಂಡಿದ್ದು, ವೈವಿಧ್ಯಮಯ ಧಾನ್ಯಗಳನ್ನು ತಮ್ಮ ಭೂಮಿಯಲ್ಲಿ ಬೆಳೆಯುತ್ತಿದ್ದಾರೆ.ಈ ಗುಂಪಿನ ಸದಸ್ಯರು ತಮ್ಮಲ್ಲೇ ಒಬ್ಬ ಸಂಘಟಕರು ಮತ್ತು ಕಾರ್ಯದರ್ಶಿಯನ್ನು ಚುನಾವಣೆ ಮೂಲಕ ಆಯ್ಕೆ ಮಾಡಿಕೊಂಡಿದ್ದಾರೆ.

ಹೊನ್ನೇರು: ಕೈಯಿಂದ ಮಾಡಿದ ಸೋಪುಗಳು