ಸಂಶೋಧನೆ ಮತ್ತು ವಿಸ್ತರಣೆ

ಪುನರ್ಚಿತ್ ಸಂಸ್ಥೆಯು ನಿರಂತರ ಸಂಶೋಧನೆ ಮತ್ತು ಗ್ರಾಮೀಣ ಭಾರತಕ್ಕೆ ಸಂಬಂಧಿಸಿದ ವಿಷಯಗಳ ಅಧ್ಯಯನಕ್ಕೆ ಒತ್ತು ನೀಡುತ್ತದೆ. ಈವರೆಗೆ ಕೈಗೊಂಡು ಪೂರ್ಣಗೊಳಿಸಿರುವ ಸಂಶೋಧನಾ ಅಧ್ಯಯನಗಳೆಂದರೆ,
  • ಪುಣಜನೂರು ಪಂಚಾಯಿತಿ ಗ್ರಾಮಗಳ ಯುವಜನರ ಅಧ್ಯಯನ (ಪಿಡಿಎಫ್ ಕನ್ನಡ)
  • ಚಾಮರಾಜನಗರ ಜಿಲ್ಲೆಯ ಪುಣಜನೂರಿನ ಗ್ರಾಮೀಣ ಸಮುದಾಯಗಳ ಅಧ್ಯಯನ (ಪಿಡಿಎಫ್ ಕನ್ನಡ)
  • ಹೊಸ ಗುತ್ತಿಗೆ ವ್ಯವಸಾಯ ಮತ್ತು ಅದರ ಪರಿಣಾಮಗಳು (ನೆರವು ರಿವಿಟಲೈಸಿಂಗ್ ರೈನ್‌ಫೆಡ್ ಅಗ್ರಿಕಲ್ಚರ್, ಹೈದರಬಾದ್) (ಪಿಡಿಎಫ್ ಕನ್ನಡ), (ಪಿಡಿಎಫ್ ಆಂಗ್ಲಭಾಷೆ)
  • ಗ್ರಾಮೀಣ ಯುವಜನರ ಸಮಗ್ರ ಕಲಿಕೆಯ ಪಠ್ಯಕ್ರಮ ಅಭಿವೃದ್ಧಿ (ಡೆವಲಪಿಂಗ್ ಎ ಕರಿಕುಲಮ್ ಫಾರ್ಇಂಟಿಗ್ರೇಟೆಡ್ ಲರ್ನಿಂಗ್ ಅಮಾಂಗ್ ರೂರಲ್ ಯೂತ್).
  • ಕರ್ನಾಟಕದ ಬರಗಾಲ ಕುರಿತ ಲೇಖನ ೨೦೧೬-೧೭.(ಪಿಡಿಎಫ್ ಕನ್ನಡ), (ಪಿಡಿಎಫ್ ಆಂಗ್ಲಭಾಷೆ)
  • ಉಪ್ಸಾರು- ಚಾಮರಾಜನಗರ ಜಿಲ್ಲೆ ಪಾಕ ವಿಧಾನ (ಮುಖಪುಟ).
  • ನಿಜರು : ಆದಿವಾಸಿ ಜೀವನ ಮತ್ತು ಶಿಕ್ಷಣದ ಸ್ಥಿತ್ಯಂತರಗಳು, ಖುಷಿ ಪ್ರಕಾಶನ, ಹಾಸನ.
  • ದಿ ಡಿಸ್‌ಪ್ಲೇಸ್ಡ್ ಥ್ರೆಶಿಂಗ್ ಯಾರ್ಡ್ : ಇನ್ವಾಲಿವೇಷನ್ ಆಫ್ ದಿ ರೂರಲ್, ಡೆವಲಪ್‌ಮೆಂಟ್ ಅಂಡ್ ಚೇಂಜ್, ಸೇಜ್ ಪಬ್ಲಿಕೇಷನ್. ೨೦೧೯
  • ಸ್ಕೂಲ್ ಡಿಫ್ರೆನ್ಸಿಯೇಷನ್ , ದಿ ಇಂಡಿಯಾ ಫೋರಂ, ಮೇ.೨೦೧೯.
ಇತರೆ ಸಂಶೋಧನಾ ಕಾರ್ಯಕ್ರಮಗಳಲ್ಲಿ ಚಾಮರಾಜನಗರ ಜಿಲ್ಲೆಯ ಬರಗಾಲ ಪರಿಸ್ಥಿತಿಯ ಅಧ್ಯಯನ ಮುಂದುವರಿದಿದ್ದು, ಪಾಳುಬಿದ್ದ ಭೂಮಿ ಕುರಿತ ಲೇಖನದ ಮೂಲಕ ಉಳುಮೆ ಮಾಡದ ಭೂಮಿಯ ಬೆಳವಣಿಗೆಯನ್ನು ಗುರುತಿಸುವುದು ಮತ್ತು ಯುವಜನರಿಗೆಸಾಮಾಜಿಕ ವಿಷಯಗಳ ಬೋಧನೆಯ ಕೈಪಿಡಿ ಸಿದ್ಧಪಡಿಸಲಾಗುತ್ತಿದೆ.ಮುಂದೆ ಸಮಗ್ರ ಕಲಿಕಾ ಕಾರ್ಯಕ್ರಮದಡಿಬೋಧನಾ ವಿಧಾನ ಮತ್ತು ಅಭ್ಯಾಸವಿಮರ್ಶಾತ್ಮಕ ಅಧ್ಯಯನ ಹೊರಬರಲಿದೆ.
ಉಪ್ಸಾರು ಪುಸ್ತಕವು ಸ್ಥಳೀಯ ಆಹಾರ ವಿಧಾನಗಳನ್ನು ಒಳಗೊಂಡ ಪುಸ್ತಕವಾಗಿದೆ. ಇದನ್ನು ಸಮಗ್ರ ಕಲಿಕಾರ್ಥಿಗಳು ಮತ್ತು ಪುನರ್ಚಿತ್ ತಂಡದ ಕೋರ್ ಟೀಂ ಸದಸ್ಯರು ಸಂಗ್ರಹಿಸಿದ್ದಾರೆ. ಇದು ಸ್ಥಳೀಯವಾಗಿದ್ದನ್ನು ಬಳಸಲು ಸಹಾಯಕವಾಗಲಿದೆ. ಈ ಪುಸ್ತಕದ ವಿನ್ಯಾಸವನ್ನು ಅಭಿಷೇಕ ಕೆ ಮಾಡಿದ್ದು, ಸ್ಥಳೀಯ ಆಹಾರ ಪದ್ಧತಿಯನ್ನು ಮುಂದುವರಿಸುವ ಮೂಲಕ ಸ್ಥಳೀಯ ಆಹಾರ ಸಂಸ್ಕೃತಿಯನ್ನು ಮತ್ತು ಆಹಾರ ಪರಮಾಧಿಕಾರ/ಸಾರ್ವಭೌಮತ್ವದ ಮಹತ್ವವನ್ನು ತಿಳಿಸುವುದಾಗಿದೆ.
Group Photo: June 18th, 2017 after the open-house on land restoration at Angarike Maala.
ವಿಸ್ತರಣೆ ಚಟುವಟಿಕೆಗಳು
೨೦೧೧ ರಿಂದ ೨೦೧೭ ರವರೆಗೆ, ಕೆಳಕಂಡ ಸಂಸ್ಥೆಗಳ ಜೊತೆ ಕಡಿಮೆ ಅವಧಿಯ ತರಬೇತಿಯ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬೆಂಗಳೂರಿನ ದೈಹಿಕ ನ್ಯೂನತೆಯುಳ ಸಂಸ್ಥೆಯ ಸಹಭಾಗಿತ್ವ(ಎಪಿಡಿ), ತೆರ್ ಡೇ ಹೋಂ ದಾವಣಗೆರೆ, ಚಾಮರಾಜನಗರದ ಸ್ಪೂರ್ತಿ, ಕೋಳಿಪಾಳ್ಯ ಪ್ರೌಢಶಾಲೆ, ಸರ್ಕಾರಿ ಪದವಿ ಕಾಲೇಜು, ಮೊಬಿಲಿಟಿ ಇಂಡಿಯಾ, ಕಬಿನಿ ತಂಡದ ಜೊತೆ ತರಬೇತಿ ನೀಡಲಾಗಿದೆ.
ಶಿಕ್ಷಣ, ಕೃಷಿ, ಬರಗಾಲ ಪರಿಸ್ಥಿತಿ, ಪ್ರಜಾಪ್ರಭುತ್ವ, ಹೊಸ ಆರ್ಥಿಕ ಮಾದಿರಗಳು/ನೀತಿ, ಸಂರಕ್ಷಣೆ ಇತ್ಯಾದಿ ವಿಯಗಳಲ್ಲಿ ತಂಡದ ಸದಸ್ಯರು ಭಾಗವಹಿಸಿದ್ದಾರೆ ಮತ್ತು ಕೊಡುಗೆ ನೀಡಿದ್ದಾರೆ. ಅಲ್ಲದೆ ಪುನರ್ಚಿತ್ ಗ್ರಾಮೀಣ ಕೃಷಿ ಅಧ್ಯಯನ ಜಾಲ (ನೆಟವರ್ಕ್ ಫಾರ್ ರೂರಲ್ ಅಂಡ್ ಅಗ್ರಾರಿಯನ್ ಸ್ಟಡೀಸ್ (www.ruralagrarianstudies.org) ಜೊತೆ ಹೆಚ್ಚು ನೆರವು ನೀಡುತ್ತಾ, ಸಕ್ರಿಯವಾಗಿ ಭಾಗವಹಿಸುತ್ತಿದೆ.

ಯುವಜನರು ಮತ್ತು ಪ್ರಜಾಪ್ರಭೂತ್ವ, ಗ್ರಾಮೀಣ ವಿಷಯಗಳು, ಕೃಷಿಗೆ ಸಂಬಂಧಿಸಿದ ವಿಷಯಗಳ ಸಂಶೋಧನೆ ಮಾಡುವುದನ್ನು ಮುಂದುವರಿಸಲಾಗಿದೆ. ಆಶ್ರಮಶಾಲೆಗಳಿಗೆ ಸಂಬಂಧಿಸಿದಂತೆ ಬದ್ರಿ ಪುಸ್ತಕ ಪ್ರಕಟವಾಗಿದ್ದು, ಕೆಲವು ಸರ್ಕಾರಿ ಶಾಲೆಗಳ ಸಮಗ್ರ ಅಧ್ಯಯನಕ್ಕೆ ಸಂಬಂಧಿಸಿದಂತೆ ಪುನರ್ ವಿಮರ್ಶೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಓಡಿ ಹೋಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು (ಪ್ರೀತಿಸಿ ಮದುವೆ ಆಗುವುದು, ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ಮದುವೆಗಳ) ಅವುಗಳ ಬಗ್ಗೆ ಆಳವಾದ ಅವಲೋಕನ ಮಾಡಲಾಗುತ್ತಿದೆ. ಬದಲಾದ ಪರಿಸ್ಥಿತಿಯಲ್ಲಿ ಕುಟುಂಬಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುವುದು, ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಚಲನೆ, ಜನರ ಹೆಬ್ಬಯಕೆ ಮತ್ತು ಲಿಂಗತ್ವದ ವಿಷಯಗಳ ಬಗ್ಗೆ ಗಮನ ನೀಡಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಕೃತಿಕ ಸಂಪನ್ಮೂಲಗಳ ಸ್ಥಿತಿ ಮತ್ತು ಹವಮಾನ ಬದಲಾವಣೆ ಬಗ್ಗೆ ದಾಖಲಾತಿ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಹಂತದ ಸರ್ಕಾರಿ ನೀತಿ, ನಿರೂಪಕರು ಮತ್ತು ಅನುಷ್ಟಾನ ಮಾಡುವವರ ಜೊತೆ ಈ ವಿಷಯಗಳನ್ನು ಹಂಚಿಕೊಳ್ಳಲಾಗುವುದು. ಮಾರ್ಚ್ ೨೦೧೯ ರ ಕೊನೆಯಲ್ಲಿ ಜಿಲ್ಲೆಯ ಯುವಜನರ ಜೊತೆ ಪ್ರಜಾಪ್ರಭುತ್ವ ವಿಷಯಗಳ ಮೇಲೆ ಸಭೆ ಮಾಡಲಾಗಿದ್ದು, ಪ್ರಜಾಪ್ರಭುತ್ವ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಹಂತದಲ್ಲಿ ನಿರಂತರವಾಗಿ ಸಭೆಗಳನ್ನು ನಡೆಸಲಾಗುವುದು. ಮುಂದಿನ ವರ್ಷದಲ್ಲಿ ಪ್ರಜಾಪ್ರಭುತ್ವ ಮತ್ತು ಭಾರತದ ಅಭಿವೃದ್ಧಿಯ ಸವಾಲುಗಳ ಬಗ್ಗೆ ಕೈಪಿಡಿ ಸಿದ್ಧಪಡಿಸಲಾಗುವುದು. ತಂಡದ ಸದಸ್ಯರು ಪ್ರಸ್ತುತದ ಸಾಮಾಜಿಕ-ರಾಜಕೀಯ ಸ್ಥಿತಿ ಬಗ್ಗೆ, ಸಾಮಾಜಿಕ ಶಿಕ್ಷಣಶಾಸ್ತ್ರ ಮತ್ತು ಕೃಷಿ ವಿಷಯಗಳನ್ನು ನಿರಂತರವಾಗಿ ದಾಖಲು ಮಾಡಿ, ಬರೆಯುವ ಮತ್ತು ಪ್ರಕಟಣೆ ಮಾಡುವ ಕೆಲಸ ಮುಂದುವರಿಸುವರು. ಸಾವಯವ ಕೃಷಿ ಬಗ್ಗೆ ನಿರಂತರವಾಗಿ ರೈತರ ಜೊತೆ ಸಭೆಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ಮಾಡಿ ತೋರಿಸಲಾಗುತ್ತಿದೆ. ನಮ್ಮ ಕಛೇರಿ ಇರುವ ನಾಗವಳ್ಳಿ ಗ್ರಾಮದಲ್ಲಿ ನೀರು ಸಂರಕ್ಷಣೆ, ಕಸ ವಿಲೇವಾರಿ, ಕೈ ತೋಟ ನಿರ್ಮಾಣದ ಮುಖ್ಯತೆಯನ್ನು ತಿಳಿಸಲಾಗುತ್ತಿದೆ. ಸಮಗ್ರ ಕಲಿಕಾ ಕಾರ್ಯಾಕ್ರಮದ ಯುವಜನರ ಜೊತೆ ಪ್ರಜಾಪ್ರಭುತ್ವ ವಿಕೇಂದ್ರೀಕರಣವನ್ನು ಮುಂದುವರಿಸಲಾಗುತ್ತದೆ.

ಸಂಶೋಧನೆ ಮತ್ತು ಹವಮಾನ ತುರ್ತಿನ ವಕಾಲತ್ತು :
ಪ್ರಾಕೃತಿಕ ಸಂಪನ್ಮೂಲಗಳ ಸ್ಥಿತಿ, ಅವುಗಳ ದುರ್ಬಳಕೆ ಮತ್ತು ಪರಿಣಾಮಗಳು ಆ ಪ್ರದೇಶದ ಹವಮಾನ ಬದಲಾವಣೆಗೆ ಹೇಗೆ ಕಾರಣವಾಗುತ್ತವೆ ಎಂಬುದರ ಅವಲೋಕಿನದ ಆಧಾರದಲ್ಲಿ ಚಾಮರಾಜನಗರ ಜಿಲ್ಲೆಯ ಹವಮಾನ ಪರಿಸ್ಥಿತಿಯ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದ ತಾಪಮಾನ ಮಾಹಿತಿ, ಮಳೆ ಪ್ರಮಾಣ, ಮಣ್ಣಿನ ಸ್ಥಿತಿ, ಆವಿಯಾಗುವಿಕೆ, ನೀರಿನ (ವಿಶೇಷವಾಗಿ ಅಂತರ್ಜಲ) ಲಭ್ಯತೆ, ಕೃಷಿ ಮತ್ತು ಬೆಳೆಯ ವಿಧಗಳು ಮತ್ತು ಮತ್ತೇ ಮತ್ತೇ ಬರದ ಸ್ಥಿತಿ ಕುರಿತು ಮಾಧ್ಯಮಿಕ ಮಾಹಿತಿಗಳನ್ನು ಸಂಗ್ರಹ ಮಾಡಲಾಗಿದೆ. ಭವಿಷ್ಯದಲ್ಲಿ ಈ ಪ್ರಾಕೃತಿಕ ಸಂಪನ್ಮೂಲಗಳ ಸ್ಥಿತಿ ಏನಾಗಬಹುದು ಮತ್ತು ಜೀವನೋಪಾಯದ ಮೇಲೆ ಯಾವ ರೀತಿಯ ಪರಿಣಾಮಗಳಾಗಬಹುದು ಮತ್ತು ಬದುಕಿನ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಕುರಿತು ಕಾರ್ಯಾಂಗ (ಆಡಳಿತಾಧಿಕಾರಿಗಳು), ಜನಪ್ರತಿನಿಧಿಗಳು ಮತ್ತು ದೊಡ್ಡ ಪ್ರಮಾಣದ ಕೃಷಿ ಸಮಯದಾಯಗಳ ಜೊತೆ ಈ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು.