ಮಣ್ಣು ಮತ್ತು ಕಣ್ಣು

ಲ್ಯಾಂಡ್ ಅಂಡ್ ಲೆನ್ಸ್

ಮಣ್ಣು, ಕಣ್ಣು ಒಂದು ಸ್ವಯಂಸೇವಾ ಜಾಲ. ಕೊಡುಗೆ ನೀಡಿದ ಕ್ಯಾಮರಾಗಳನ್ನು ಪಡೆದು ಗ್ರಾಮೀಣ ಮಹಿಳೆಯರು ಮತ್ತು ಯುವಕರಿಗೆ ಛಾಯಾಗ್ರಹಣದ ಕೌಶಲ್ಯವನ್ನು ಈ ಜಾಲವು ಕಲಿಸುತ್ತದೆ. ಹಾಗೆಯೇ ಅವರ ಛಾಯಚಿತ್ರಗಳನ್ನು ಹಂಚಿಕೊಳ್ಳಲು/ಪ್ರದರ್ಶಿಸಲು ವೇದಿಕೆಗಳನ್ನು ಒದಗಿಸುತ್ತದೆ. ಈ ಛಾಯಾಗ್ರಾಹಕರು ಪರಿಸರ ಸಂಬಂಧೀ ಮತ್ತು ಪ್ರಯೋಗಾತ್ಮಕ ಸಾಕ್ಷ್ಯಚಿತ್ರಗಳನ್ನು ತಾವೇ ಪುನರ್ಚಿತ್ ಮತ್ತು ವನಸ್ತ್ರೀ ಸಂಸ್ಥೆಗಳಿಗೆ ನಿರ್ಮಿಸುತ್ತಾರೆ.

ಕ್ಯಾಮರಾಗಳನ್ನು ತಮ್ಮ ಸಾಮಾಜಿಕ ಮತ್ತು ಭೌತಿಕ ಜಗತ್ತಿಗೆ ಒಯ್ಯುವ ಮೂಲಕ ಚಾಮರಾಜನಗರ ಮತ್ತು ಸಿರಸಿಯ ಗ್ರಾಮೀಣ ಮಹಿಳೆಯರು ಮತ್ತು ಯುವಕರು ಭಾರತದ ಗ್ರಾಮೀಣ ನಿತ್ಯ ಬದುಕಿನ ಸಾಮಾಜಿಕತೆ ಮತ್ತು ಸವಾಲುಗಳಿಗೆ ಅಧಿಕೃತತೆ ನೀಡುತ್ತಿದ್ದಾರೆ.

ಪ್ರತೀ ಚಿತ್ರವೂ ಗ್ರಾಮೀಣ ಬದುಕಿನ ವಿವಿಧ ತುಣುಕಗಳನನ್ನು ಪ್ರತಿನಿಧಿಸುತ್ತದೆ. ಋತುಮಾನದ ಆಚರಣೆಗಳ ಹರ್ಷ, ಗೆಳೆತನದ ಹೆಣಿಗೆ, ಖಾಲಿಯಾಗುತ್ತಿರುವ ಮನೆಗಳು, ಅಶಾಂತ ಯುವಕರು, ಪಾಳುಬಿದ್ದ ಭೂಮಿ ಹಾಗೂ ಸ್ಥಳೀಯ ಜೀವ ವೈವಿಧ್ಯತೆಯ ಸೌಂದರ್ಯ- ಹೀಗೆ ವಿವಿಧ ಆಯಾಮಗಳನ್ನು ಈ ಚಿತ್ರಗಳು ಬಿಂಬಿಸುತ್ತವೆ.

landandlens.org

ಗ್ರಾಮೀಣ ಮಹಿಳಾ ಮತ್ತು ಯುವ ಛಾಯಾಗ್ರಾಹಕರು ಕ್ಯಾಮರಾವನ್ನು ಕೇವಲ ಸಾಧನವಾಗಿ ಬಳಸದೇ ತಮ್ಮ ಕಣ್ಣಿನ ವಿಸ್ತರಣೆಯಾಗಿಸಿದ್ದಾರೆ. ತನ್ಮೂಲಕ ತಮ್ಮ ಬದುಕಿನ ಒಳ ನೋಟಗಳನ್ನು ಸಾದರಪಡಿಸಿದ್ದಾರೆ. ತಮ್ಮ ಪರಿಚಿತ ಜೀವನೆಲೆ, ತಮ್ಮ ಪ್ರಿಯ ತಾಣಗಳನ್ನು ಸೆರೆಹಿಡಿದಿದ್ದಾರೆ. ಪ್ರತೀ ಫೊಟೋವೂ ಈ ಛಾಯಾಗ್ರಾಹಕರಲ್ಲಿ ತಮ್ಮ ಚಿತ್ರದ ವಸ್ತು-ವಿಶೇಷಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲು ಸಹಾಯ ಮಾಡಿವೆ. ಯಾಕಿಷ್ಟು ಮನೆಗಳು ನಿರ್ಜೀವವಾಗಿವೆ? ಯಾಕೆ ಬರಪೀಡಿತ ಪ್ರದೇಶದಲ್ಲಿ ಅಷ್ಟೊಂದು ಮರಗಳನ್ನು ಕಡಿಯಲಾಗಿದೆ? ಪವಿತ್ರವೆಂದು ಬಗೆಯುವ ದೇವಸ್ಥನದ ಕಲ್ಯಾಣಿ ಯಾಕೆ ಕೊಚ್ಚೆ ತುಂಬಿ ಮಲಿನಗೊಂಡಿದೆ? ನಮ್ಮ ಹಿರಿಯರ ಸ್ಥಿತಿ ಏನು? ಎಂಬಿತ್ಯಾದಿ ಪ್ರಶ್ನೆಗಳಲ್ಲದೇ ತಮ್ಮ ಸುತ್ತ ಮುತ್ತಲಿನ ಪ್ರದೇಶದ ಸೌಂದಯದ ಬಗ್ಗೆ ಪ್ರೀತಿ ಪ್ರಶಂಸೆಗಳು ಇಲ್ಲಿ ತುಂಬಿವೆ. ಬೆಳೆದ ಮರಗಳು, ಹಸಿರು ಹಾದಿಗಳು, ಋತುಸಂಬಂಧಿ ಹೂಗಳು- ಹೀಗೆ ಕಣ್ಣು ಹೊಸತಾಗಿ ಗ್ರಹಿಸಿದ ಪುರಾವೆ ಇಲ್ಲಿದೆ.

ಈ ಛಾಯಾಚಿತ್ರಗಳು ಅವುಗಳಷ್ಟಕ್ಕೇ ಮುಖ್ಯವೇನಲ್ಲ. ಛಾಯಾಚಿತ್ರ ತೆಗೆಯುವುದು ಮತ್ತು ತಮ್ಮ ಹಿಂಜರಿಕೆ, ಚಡಪಡಿಕೆ ಮತ್ತು ಭಯಗಳನ್ನು ನೀಗುವ ಪ್ರಕ್ರಿಯೆ ಇಲ್ಲಿ ಮುಖ್ಯ.

ಛಾಯಾಚಿತ್ರ ತೆಗೆಯುವುದೆಂದರೆ ತನ್ನನ್ನೇ ಒಂದು ಸಾರ್ವಜನಿಕ ವೇದಿಕೆಗೆ ಒಡ್ಡಿಕೊಳ್ಳುವುದೆಂದರ್ಥ. ಇದು ಆತ್ಮ ವಿಶ್ವಾಸದ ಕುರುಹು. ತಾವೂ ಕಂಡಿದ್ದರ ಬಗ್ಗೆ ಗಮನ ಸೆಳೆಯುವ ಯತ್ನ ಕೂಡಾ.

ಸೆಲ್ಫಿ ಮತ್ತು sಸೆಲ್ಫಿತ್ವ /ಸ್ವಾರ್ಥ ಹರಡಿ ಕೂತಿರುವ ಈ ಕಾಲದಲ್ಲಿ; ಸಮಾಜವೇ ಮಾಧ್ಯಮೀಕರಣಗೊಂಡಿರುವ ಈ ಹೊತ್ತಿನಲ್ಲಿ ಛಾಯಾಚಿತ್ರಗಳು ತಮ್ಮೊಳಗೆ ಮತ್ತು ಇತರರೊಂದಿಗೆ ಒಂದು ಸಂವಾದವನ್ನು ಸೃಷ್ಟಿಸಲು ಛಾಯಾಗ್ರಾಹಕರಿಗೆ ಅನುವು ಮಾಡಿಕೊಟ್ಟಿದೆ.

ಮಣ್ಣು ಮತ್ತು ನೀರು

ಕೃಷಿ ವಲಯದಲ್ಲಿ ಮಣ್ಣು ಮತ್ತು ನೀರು ಒಂದಕ್ಕೊಂದು ಪೂರಕವಾಗಿದ್ದು, ಮಣ್ಣಿನ ಅವನತಿ ಮತ್ತು ನೀರಿನ ಕೊರತೆಗಳು ಗಂಭೀರ ವಿಷಯಗಳಾಗಿವೆ. ಮಣ್ಣಿನ ಸ್ಥಿತಿ, ನೀರು ಮತ್ತು ಮಣ್ಣಿನ ರಚನೆಗಳು ಗ್ರಾಮೀಣ ವಲಯದ ಸ್ಥಿತಿಗತಿಗಳನ್ನು ತಿಳಿಸುತ್ತವೆ.

ಭೂಮಿ ಮತ್ತು ಬಾನಂಚು

ಸೌಂದರ್ಯ ಮತ್ತು ನಗ್ನತೆ, ಸೂರ್ಯೋದಯ ಮತ್ತು ಸೂರ್ಯಾಸ್ಥ – ಪ್ರತ್ಯೇಕತೆ ಅಥವಾ ಉಲ್ಲಾಸದಲ್ಲಿ ಗ್ರಾಮೀಣ ಪರಿಸರದ ಮನಸ್ಥಿತಿಯನ್ನು ತೋರಿಸುತ್ತದೆ.

ಕುಟಂಬ ಮತ್ತು ಸ್ನೇಹಿತರು:

ಸಂಬಂಧಿಕರು, ಸ್ನೇಹಿತರು, ಅಕ್ಕ-ಪಕ್ಕದವರು, ಶಾಲಾ ಸಹಪಾಠಿಗಳು ಮತ್ತು ರಸ್ತೆಯ ಸಹಪಾಠಿಗಳು ಈ ಎಲ್ಲವೂ ಗ್ರಾಮೀಣ ಸಮಾಜದ ಕೇಂದ್ರ ಬಿಂದು. ಇದೆಲ್ಲದರಲ್ಲೂ ಇರುವುದು ನಗು ಮತ್ತು ಕೋಪ, ಮನೋರಂಜನೆ, ತಾಳ್ಮೆ, ಪ್ರೀತಿ ಮತ್ತು ವಿಶ್ವಾಸ, ಆರೈಕೆ, ಸಹಾನುಭೂತಿ, ಒಡಕು. ಇದೆಲ್ಲದಕ್ಕೂ ಮಿಗಿಲಾಗಿ ಕುಟುಂಬದ ಹೊಂದುವಿಕೆ ಮತ್ತು ಸ್ನೇಹಿತರೇ ಒಳ್ಳೇಯ ಟೈಂ ಪಾಸ್.

ಜೀವನೋಪಾಯ

ಗ್ರಾಮೀಣ ಜೀವನದ ಆರ್ಥಿಕ ಲಯದಲ್ಲಿ ನಾನಾ ತರಹದ ಜೀವನೋಪಾಯಗಳು ಇವೆ ; ಉಳುಮೆ, ಬಿತ್ತನೆ, ಸಂಸ್ಕರಣೆ, ಮಾರಾಟ, ಮೇಯುವ ಹುಲ್ಲು, ಹೊಲಿಗೆ ಮತ್ತು ನಾನಾ ತರಹದ ಮೇಲ್ವಿಚಾರಣೆ. ಈ ಪ್ರತಿ ಕಾರ್ಯದಲ್ಲಿ ಕೆಲಸ ಮತ್ತು ವೃತ್ತಿಯ ವ್ಯಾಖ್ಯಾನವನ್ನು ಮೀರಿ ಇರುವುದು ಕೌಶಲ್ಯ ಮತ್ತು ಜ್ಞಾನ.

ಕಸ

ಕಸವು ಹಳ್ಳಿಯಲ್ಲಿ ಎಲ್ಲಿ ನೋಡಿದರೂ ಉಪಸ್ಥಿತಿ ಆಗಿದೆ. ಇವು ಬದಲಾಗುತ್ತಿರುವ ಜೀವನಶೈಲಿ ಮತ್ತು ಕೊಳ್ಳುಬಾಕ ಸಂಸ್ಕೃತಿಯ ಪ್ರಭಾವ. ಇದರ ಪರಿಣಾಮ ಮಾಲಿನ್ಯ, ಅನಾರೋಗ್ಯ ಮತ್ತು ಪರಿಸರ ಸಂಪನ್ಮೂಲಕ್ಕೆ ಒಡೆತ.