ಭೂಮಿ ಪ್ರಾಯೋಜಕ ಕಾರ್ಯಕ್ರಮ

ಸಾವಯವ ಕೃಷಿ ನೆರವು ಕಾರ್ಯಕ್ರಮ

ಆಗಸ್ಟ್ ೨೦೧೬ರವರೆಗಿನ ಬರಗಾಲದ ಕಾರಣ ಹಲವಾರು ಅತಿ ಸಣ್ಣ ರೈತರು ತಮ್ಮ ಭೂಮಿಯಲ್ಲಿ ವ್ಯವಸಾಯ ಮಾಡಲಾಗದೆ ಹಾಳು ಬಿಟ್ಟಿದ್ದಾರೆ. ಹಲವು ಯುವಜನರು ತಮ್ಮ ಜೀವನೋಪಾಯ ಮತ್ತು ಆದಾಯಕ್ಕಾಗಿ ಗುಳೆ (ವಲಸೆ) ಹೋಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಒಣ ಮತ್ತು ಸುಸ್ಥಿರ ಬೇಸಾಯಕ್ಕೆ(ನೀರಾವರಿ ಮತ್ತು ಆಳ ಕೊಳವೆಬಾವಿ ಕೃಷಿಯನ್ನು ಹೊರತುಪಡಿಸಿ) ಭೂಮಿ ಪ್ರಾಯೋಜಕ ಕಾರ್ಯಕ್ರಮದಡಿ ನೆರವು ನೀಡಲಾಗುತ್ತಿದೆ.ಈ ಕಾರ್ಯಕ್ರಮಕ್ಕೆ ಹಣಕಾಸಿನ ನೆರವು ಪುನರ್ಚಿತ್‌ಗೆ ಸ್ನೇಹಿತರ ವಲಯದಿಂದ ಲಭಿಸಿದೆ. ಅವರಿಗೆ ನಾವು ಹೃತ್ಪೂರ್ವಕವಾದ ದನ್ಯವಾದಗಳನ್ನು ತಿಳಿಸುತ್ತೇವೆ.

ಈ ಕಾರ್ಯಕ್ರಮದಡಿ ಕೆಲವು ರೈತರಿಗೆ ತಮ್ಮ ಭೂಮಿ ಸಿದ್ಧಪಡಿಸಲು ಮತ್ತು ಬಿತ್ತನೆ ಮಾಡಲು ನೆರವು ನೀಡಲಾಗಿದೆ.ಆದರೆ ಮಳೆಯ ಕೊರತೆಯಿಂದಾಗಿ ಕಾಳುಗಳು ಮತ್ತು ಬೆಳೆಯ ಪ್ರಮಾಣ ತುಂಬಾ ಕಡಿಮೆ ಆಯಿತು. ಭೂಮಿ ಪ್ರಾಯೋಜಕ ಕಾರ್ಯಕ್ರಮದಡಿ ಭೂಮಿಗೆ ಬಿತ್ತನೆ ಮಾಡುವಾಗ, ಕಳೆ ತೆಗೆಯುವಾಗ ಮತ್ತು ಬೆಳೆ ತೆಗೆಯುವ ಸಂದರ್ಭಗಳಲ್ಲಿ ಭೇಟಿ ನೀಡಿದ್ದೇವೆ. ಕೆಲವರು ತಮ್ಮ ಭೂಮಿಯಲ್ಲಿ ಬೆಳೆದ ಸ್ವಲ್ಪದರಲ್ಲೂ ನಮಗೆ ಕೃತಜ್ಞತೆ ಮತ್ತು ಮೆಚ್ಚುಗೆಯಿಂದ ತಾವು ಬೆಳೆದ ಕಾಳುಗಳನ್ನು ನಮಗೆ ಉಚಿತವಾಗಿ ನೀಡಿದ್ದಾರೆ. [ ಈ ಕಾರ್ಯಕ್ರಮದ ಬೆಳವಣಿಗೆಗಳನ್ನು ನಮ್ಮ ಫೇಸ್ಬುಕ್ ಮೂಲಕ ಅನುಸರಿಸಿ ]