ಸುನಿತಾ ರಾವ್

ಸುನಿತಾ ರಾವ್ :ಇವರು ಕೇಂದ್ರೀಯ ವಿಶ್ವವಿದ್ಯಾಲಯ ಪಾಂಡಿಚೇರಿಯಲ್ಲಿ ಪರಿಸರ ವಿಷಯದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆದಿದ್ದಾರೆ. ಇವರ ಆಸಕ್ತಿ ಕ್ಷೇತ್ರಗಳು :

  • ಪಶ್ಚಿಮ ಘಟದಲ್ಲಿ ಅರಣ್ಯ ಆಧಾರಿತ ಕೈ ತೋಟ ನಿರ್ಮಾಣ
  • ಔಪಚಾರಿಕ ಮತ್ತು ಅನೌಪಚಾರಿಕ ವಿಧಾನದ ಮೂಲಕ ಜೀವನದ ಕಲಿಕೆ ಮಾದರಿಗಳ ಶಿಕ್ಷಣ
  • ಸುಸ್ಥಿರ ಜೀವನೋಪಾಯ ಮತ್ತು ಮಾರುಕಟ್ಟೆ
  • ಸಂರಕ್ಷಣೆ ಮತ್ತು ಸಮುದಾಯದ ಸಂಘಟನೆ ಮೂಲಕ ಲಿಂಗ ಅಂತರವನ್ನು ಕಡಿಮೆ ಮಾಡುವ ಅವಕಾಶ

ಸುನಿತಾ ರಾವ್ ಅವರು ದೆಹಲಿ, ಪುಣೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪದಲ್ಲಿ ಪರಿಸರ ಸಂಬಂಧಿ ಕೆಲಸ ಮಾಡಿದ್ದಾರೆ. ಇವರು ೨೦೦೨ ರಿಂದ ಈವರೆಗೆ ಶಿರಸಿಯಲ್ಲಿ ಅರಣ್ಯ ಕೃಷಿಯನ್ನು ನಂಬಿ ಕೆಲಸ ಮಾಡುತ್ತಿದ್ದಾರೆ. ಸುನಿತಾ ಅವರು ವನಸ್ತ್ರೀ ಸಂಘಟನೆಯ ಸಂಸ್ಥಾಪಕ ಸದಸ್ಯರಾಗಿದ್ದು, (www.vanastree.org) ಶಿರಸಿ ಭಾಗದ ಮಹಿಳಾ ರೈತರಿಂದ ಬೀಜ ಸಂಗ್ರಹ ಮತ್ತು ಬೀಜ ಸಂರಕ್ಷಣೆಯ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಮತ್ತು ಶಿರಸಿಯಲ್ಲಿ ಮಲೆನಾಡುಮೇಳ ಯಶಸ್ಸಿನ ಪ್ರಮುಖ ಕೇಂದ್ರ ಬಿಂದು ಸುನಿತಾ ರಾವ್. ಅವರ ಹವ್ಯಾಸಗಳು ಕ್ರಿಯಾಶೀಲ ಬರವಣಿಗೆ, ಓದು, ಭೂಮಿಯನ್ನು ಮೂಲ ಸ್ವರೂಪಕ್ಕೆ ತರುವುದು, ಪರಿಸರ ಭವಿಷ್ಯದ ಬಗ್ಗೆ ಯೋಜನೆ ರೂಪಿಸುವುದು, ನಾಯಿಯನ್ನು ವಾಕಿಂಗ್‌ಗೆ ಕರದುಕೊಂಡು ಹೋಗುವುದು ಮತ್ತು ಸಾಬೂನು ಸಿದ್ಧಪಡಿಸುವುದು.

ಇವರು ಪುನರ್ಚಿತ್‌ನ ಸಮಗ್ರ ಕಲಿಕಾ ಕಾರ್ಯಕ್ರಮದ ತರಗತಿಗೆ ಬೇಕಾದ ಕೈ ತೋಟ ರಚನೆ ಮತ್ತು ಬೋಧನೆ, ನಾಗವಳ್ಳಿ ಗ್ರಾಮದ ಸುತ್ತಮುತ್ತ ಕೈ ತೋಟ ಬೆಳೆಸಲು ಚಟುವಟಿಕೆಗಳ ಮೂಲಕ ಔಟ್ ರೀಚ್ ಮಾಡುತ್ತಿದ್ದಾರೆ. ಸ್ವಯಂ ಸೇವಕರ ಜೊತೆ ಸೇರಿ ಅಂಗರಿಕೆ ಮಾಳದ ಗ್ರೀನ್ ಪ್ರಿಂಟ್ ಸಿದ್ಧಪಡಿಸಿದ್ದಾರೆ. ಹೋನ್ನೇರು ಗ್ರಾಮೀಣ ಯುವಜನ ಒಕ್ಕೂಟದ ಸದಸ್ಯರಿಗೆ ಸಾಬೂನು ಮಾಡುವುದನ್ನು ಆರಂಭಿಸಿದರು.