ಮುಖ್ಯ ತಂಡ

ಪಿ. ವೀರಭದ್ರನಾಯ್ಕ (ಬದ್ರಿ)

ಪಿ. ವೀರಭದ್ರನಾಯ್ಕ (ಬದ್ರಿ)

ಮುಖ್ಯ ತಂಡ

ಪಿ. ವೀರಭದ್ರನಾಯ್ಕ (ಬದ್ರಿ) : ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೊತ್ತರ ಪದವಿ, ಮಹಿಳಾ ಅಧ್ಯಯನದಲ್ಲಿ ಡಿಪ್ಲಮೊ ಪದವಿ ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣದಲ್ಲಿ ಕೆಲಸ ಮಾಡಿದ್ದು, ಹಕ್ಕು ಆಧಾರಿತ ಅಭಿವೃದ್ಧಿ ಮತ್ತು ಯುವಜನರನ್ನು ಸಂಘಟಿಸುತ್ತಾರೆ. ಚಾಮರಾಜನಗರ ಜಿಲ್ಲೆಯ ಆಶ್ರಮ ಶಾಲೆಗಳನ್ನು ಕುರಿತು ಆಳವಾದ ಅಧ್ಯಯನ ಮಾಡಿದ್ದು, ಆದಿವಾಸಿ/ಬುಡಕಟ್ಟು ಜನರ ಶಿಕ್ಷಣ ಸುಧಾರಣೆಗೆ ಸಂಬಂಧಿಸಿದಂತೆ ವಕಾಲತ್ತು (ಅಡ್ವಕೆಸಿ) ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಂದೆ ನೋಡಿ

ಸುನಿತಾ ರಾವ್

ಸುನಿತಾ ರಾವ್

ಮುಖ್ಯ ತಂಡ

ಸುನಿತಾ ರಾವ್ ಅವರು ದೆಹಲಿ, ಪುಣೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪದಲ್ಲಿ ಪರಿಸರ ಸಂಬಂಧಿ ಕೆಲಸ ಮಾಡಿದ್ದಾರೆ. ಇವರು ೨೦೦೨ ರಿಂದ ಈವರೆಗೆ ಶಿರಸಿಯಲ್ಲಿ ಅರಣ್ಯ ಕೃಷಿಯನ್ನು ನಂಬಿ ಕೆಲಸ ಮಾಡುತ್ತಿದ್ದಾರೆ. ಸುನಿತಾ ಅವರು ವನಸ್ತ್ರೀ ಸಂಘಟನೆಯ ಸಂಸ್ಥಾಪಕ ಸದಸ್ಯರಾಗಿದ್ದು, (www.vanastree.org) ಶಿರಸಿ ಭಾಗದ ಮಹಿಳಾ ರೈತರಿಂದ ಬೀಜ ಸಂಗ್ರಹ ಮತ್ತು ಬೀಜ ಸಂರಕ್ಷಣೆಯ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಮತ್ತು ಶಿರಸಿಯಲ್ಲಿ ಮಲೆನಾಡುಮೇಳ ಯಶಸ್ಸಿನ ಪ್ರಮುಖ ಕೇಂದ್ರ ಬಿಂದು ಸುನಿತಾ ರಾವ್. ಅವರ ಹವ್ಯಾಸಗಳು ಕ್ರಿಯಾಶೀಲ ಬರವಣಿಗೆ, ಓದು, ಭೂಮಿಯನ್ನು ಮೂಲ ಸ್ವರೂಪಕ್ಕೆ ತರುವುದು, ಪರಿಸರ ಭವಿಷ್ಯದ ಬಗ್ಗೆ ಯೋಜನೆ ರೂಪಿಸುವುದು, ನಾಯಿಯನ್ನು ವಾಕಿಂಗ್‌ಗೆ ಕರದುಕೊಂಡು ಹೋಗುವುದು ಮತ್ತು ಸಾಬೂನು ಸಿದ್ಧಪಡಿಸುವುದು.

ಮುಂದೆ ನೋಡಿ

ಪಿ. ಶ್ರೀನಿವಾಸ ವಾಸು

ಪಿ. ಶ್ರೀನಿವಾಸ ವಾಸು

ಮುಖ್ಯ ತಂಡ

ಪಿ. ಶ್ರೀನಿವಾಸ ವಾಸು ಅಥವಾ ಮಣ್ಣು ವಾಸು. ಇವರು ಮಣ್ಣು (ಸಾಯಿಲ್) ಸಂಸ್ಥೆಯ ಸಂಸ್ಥಾಪಕರು. ಈ ಸಂಸ್ಥೆಯ ಮೂಲಕ ಮಣ್ಣಿನ ಆರೋಗ್ಯ ಸುಧಾರಣೆಗೆ ಇರುವ ಅಡೆತಡೆಗಳನ್ನು ನಿಲ್ಲಿಸಿ, ಮಣ್ಣನ್ನು ಸಂರಕ್ಷಣೆ ಮಾಡುತ್ತಿದ್ದಾರೆ. ಇವರು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಸಾವಯವ ಕೃಷಿಯನ್ನು ಮಾಡಲು ಜನರಿಗೆ ಉತ್ತೇಜನ ನೀಡುವ ಕೆಲಸ ಮಾಡಿದ್ದಾರೆ. ಇವರಿಗೆ ವಿಶೇಷವಾಗಿ ಭಾರತದ ಮಣ್ಣಿನ ಸ್ಥಿತಿಯ ಸುಧಾರಣೆ ಬಗ್ಗೆ ಆಸಕ್ತಿ ಇದೆ.ಇವರು ಬೋಧನೆಯ ಹಲವು ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಿದ್ದು, ಮಣ್ಣಿನ ಸುತ್ತಲಿನ ವಿಷಯಗಳ ಕೇಂದ್ರೀಕರಿಸಿ ಪ್ರಾತ್ಯಕ್ಷಿಕೆ ಮಾಡಿ ತೋರಿಸುತ್ತಾರೆ. ಇವರ ಬೋಧನಾ ವಿಧಾನದಲ್ಲಿ ವಿಶೇಷತೆಯಿದ್ದು, ಅನುಭವವುಳ್ಳ ಶಿಕ್ಷಕರಾಗಿ ಹಾಸ್ಯ ಪ್ರವೃತ್ತಿ, ಹಾಡು ಹೇಳುವುದು ಮತ್ತು ಕವನ ರಚನೆಯ ಪರಿಣಿತರು. ಸ್ಥಳೀಯ ವಿಷಯಗಳ ಬಗ್ಗೆ ಆಳವಾದ ಜ್ಞಾನ ಮತ್ತು ವೈಜ್ಞಾನಿಕ ಅನುಭವವಿದೆ. ಇವರು ಮಣ್ಣು, ಬೆಳೆ, ಸಾವಯವ ಗೊಬ್ಬರ, ದ್ರವ ಗೊಬ್ಬರ ಮತ್ತು ಬೀಜ ಸಂರಕ್ಷಣೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಸಂಪನ್ಮೂಲ ವ್ಯಕ್ತಿ.

ಇವರು ಪುನರ್ಚಿತ್‌ನಲ್ಲಿ ಸುಸ್ಥಿರ ಕೃಷಿ ಬೋಧನೆ ಮತ್ತು ಬೋಧನಾ ಸಾಮಾಗ್ರಿಗಳ ಅಭಿವೃದ್ಧಿಪಡಿಸುವಲ್ಲಿ ಹಾಗೂ ಯುವ ಕಲಿಕಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮಾದರಿಗಳನ್ನು (ಪ್ಲಾಟ್) ಮಾಡುಲು ನೆರವು ನೀಡುತ್ತಾರೆ.

ಎಚ್.ಮುತ್ತುರಾಜು

ಎಚ್.ಮುತ್ತುರಾಜು

ಮುಖ್ಯ ತಂಡ

ಎಚ್.ಮುತ್ತುರಾಜು ; ಇವರು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲದಿಂದ ಜೀವಶಾಸ್ತ್ರ ವಿಷಯದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಮೊದಲು ಖಾಸಗಿ ಶಾಲೆಯ ಮುಖ್ಯ ಶಿಕ್ಷಕರಾಗಿ ಕೆಸಲ ನಿರ್ವಹಿಸಿದ್ದು, ಬೈಫ್ ತಂಡದ ಸದಸ್ಯರಾಗಿ, ಯಳಂದೂರಿನಲ್ಲಿ ಕೆಲಸ ಮಾಡಿದ್ದಾರೆ. ಇವರ ಆಸಕ್ತಿ ಕ್ಷೇತ ಸುಸ್ಥಿರ ಕೃಷಿ, ಹಣ್ಣಿನ ತೋಟ ನಿರ್ಮಾಣ ಮತ್ತು ಭೂಮಿಯ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಇವರಿಗೆ ಕಂಪ್ಯೂಟರ್ ಮತ್ತು ಕ್ಯಾಮರ ಬಳಕೆಯಲ್ಲಿ ಆಸಕ್ತಿ ಇದೆ.
ಎಚ್. ಸುಮ

ಎಚ್. ಸುಮ

ಮುಖ್ಯ ತಂಡ

ಎಚ್. ಸುಮ : ಇವರು ಲೆಕ್ಕ ನಿರ್ವಹಣೆಯಲ್ಲಿ ತರಬೇತಿ ಪಡೆದ ಪರಿಣತರು. ಇವರು ಈ ಮೊದಲು Reuters ಮತ್ತು Ernt and Young (Bengaluru) ನಲ್ಲಿ ೧೨ ವರ್ಷಗಳು ಕೆಲಸ ಮಾಡಿದ್ದಾರೆ.ಇವರ ಆಸಕ್ತಿ ಪರಿಸರ ಮತ್ತು ಸಾಮಾಜಿಕ ವಿಷಯಗಳಾಗಿದೆ. ಆ ಕಾರಣದಿಂದ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ್ದಾರೆ.ಪ್ರಸ್ತುತ ಇವರು ವನಸ್ತ್ರೀ ಮತ್ತು ಪನರ್ಚಿತ್ ಸಂಸ್ಥೆಯ ಎರಡೂ ಕಡೆ ಕೆಲಸ ಮಾಡುತ್ತಿದ್ದಾರೆ.

ಪುನರ್ಚಿತ್‌ಲ್ಲಿ ಇವರು ಲೆಕ್ಕಚಾರಗಳನ್ನು ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಸಮಗ್ರ ಕಲಿಕಾ ಕಾರ್ಯಕ್ರಮದಲ್ಲಿ ಲೆಕ್ಕಚಾರದ ವಿಷಯಗಳನ್ನು ಬೋಧನೆ ಮಾಡುತ್ತಿದ್ದಾರೆ. ಇವರ ಬೋಧನಾ ವಿಧಾನದಲ್ಲಿ ಯುವಜನರು ಲೆಕ್ಕಚಾರದ ಜೊತೆ ತೀರ್ಮಾನ ತೆಗೆದುಕೊಳ್ಳುವುದು, ಖರ್ಚು ವೆಚ್ಚದ ಬಗ್ಗೆ ವಿಮರ್ಶಾತ್ಮಕವಾಗಿ ಆಲೋಚಿಸುವುದನ್ನು ಕಲಿಸುತ್ತಾರೆ.ಪರಿಸರದ ಬಗ್ಗೆ ಕಾಳಜಿಯುಳ್ಳ ವ್ಯಕ್ತಿಯಾಗಿದ್ದು, ಕೈತೋಟ ಮತ್ತು ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ಮೂಲಕ ಖಷಿಪಡುತ್ತಾರೆ.

ಸಮೀರಾ ಅಗ್ನಿಹೋತ್ರಿ

ಸಮೀರಾ ಅಗ್ನಿಹೋತ್ರಿ

ಮುಖ್ಯ ತಂಡ

ಸಮೀರಾ ಅಗ್ನಿಹೋತ್ರಿ : ಇವರು ವನ್ಯಜೀವಿ ಜೀವಶಾಸ್ತ್ರ ಮತ್ತು ಸಂರಕ್ಷಣೆ (‘Wildlife Biology and Conservation’) ವಿಷಯದಲ್ಲಿ ಸ್ನಾತಕೊತ್ತರ ಪದವಿಯನ್ನು WCS India – National Centre for Biological Sciences programme ನಿಂದ ಪಡೆದಿದ್ದಾರೆ. ಇವರು ಕರ್ನಾಟಕದ ದಕ್ಷಿಣ ಭಾಗದ ಬಿಳಿಗಿರಿರಂಗನ ಬೆಟ್ಟ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಓಡಾಡಿಪಕ್ಷಿಗಳ ಧ್ವನಿ /ಹಾಡನ್ನು ಮೈಕ್ ಮತ್ತು ರೆಕಾರ್ಡರ್ ಹಿಡಿದು ದಾಖಲು ಮಾಡಿದ್ದಾರೆ. ಇವರು ನೂರಕ್ಕೂ ಹೆಚ್ಚು ಪಕ್ಷಿಗಳ ಹಾಡನ್ನು ದಾಖಲು ಮಾಡಿದ್ದು, ಕನ್ನಡ ಮತ್ತು ಇಂಗ್ಲೀಷ್‌ನ ಎರಡೂ ಭಾಷೆಯಲ್ಲೂ ಸಿ.ಡಿ ಮಾಡಿದ್ದಾರೆ. ಇವರು ಪರಿಸರ ವಿಜ್ಞಾನದಲ್ಲಿ ಬಹಳ ಮುಖ್ಯವಾದ ಪಕ್ಷಿ ರಾಕೇಟ್ ಟೈಲ್ಡ್ ಡ್ರೋಂಗೋ ಮೇಲೆ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿಯನ್ನು ಬೆಂಗಳೂರಿನ ಇಂಡಿಯನ್ ಇಸ್ಟಿಟ್ಯೂಟ್ ಆಫ್ ಸೈನ್ಸ್ ವಿಭಾಗದಿಂದ ಪಡೆದುಕೊಂಡಿದ್ದಾರೆ.

ಮುಂದೆ ನೋಡಿ

ದ್ವಿಜೇಂದ್ರನಾಥ್ ಗುರು

ದ್ವಿಜೇಂದ್ರನಾಥ್ ಗುರು

ಮುಖ್ಯ ತಂಡ

ದ್ವಿಜೇಂದ್ರನಾಥ್ ಗುರು : ಇವರು ಸ್ವತಂತ್ರವಾಗಿ ತಾಂತ್ರಿಕತೆಯ ಅಭಿವೃದ್ಧಿಪಡಿಸುತ್ತಾ, ಸಲಹಾಗಾರರಾಗಿ ಹಾಗೂ ಸುಸ್ಥಿರ ಆಹಾರ ವ್ಯವಸ್ಥೆಯ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯವಸಾಯೋತ್ಪನ್ನಗಳ ಸಂಗ್ರಹ, ತಾಂತ್ರಿಕತೆ ಬಳಸಿಕೊಂಡು ಬೆಳೆಗಳ ಸಂಸ್ಕರಣೆ ಮಾಡುವ ವಿಧಾನಗಳ ಬಗ್ಗೆ ಮತ್ತು ಸಿರಿಧಾನ್ಯಗಳ ಸಂರಕ್ಷಣೆ ಮತ್ತು ಬಳಕೆಯಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಇವರು ಅಮೇರಿಕಾದ ಮಿನ್ನಿಸೋಟಾ (Minnesota) ವಿಶ್ವವಿದ್ಯಾಲಯದಲ್ಲಿ ಮೆಕೆನಿಕಲ್ ಇಂಜಿನೀಯರಿಗ್ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ದ್ವಿಜಿಯವರ ಬರಹಗಳು ಮತ್ತು ವಿಷಯ ಮಂಡನೆಯ ಬಗ್ಗೆ http://themillet.org, http://millets.wordpress.com/author/dnguru ಹಾಗೂ ಇವರ ಬ್ಲಾಗ್ http://dwiddly.wordpress.com ನೋಡಿ. ಇವರು ಜನರೊಟ್ಟಿಗೆ ತರಬೇತಿಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ. ಪ್ರಾತ್ಯಕ್ಷಿಕೆ, ಮಾತು ಮತ್ತು ಚರ್ಚೆಗೆ ಸಾಮಾಜಿಕ ಜಾಲಾತಾಣದಲ್ಲಿ LinkedIn, Facebook ನಲ್ಲಿ ಸಕ್ರಿಯರಾಗಿದ್ದಾರೆ.

ಪುನರ್ಚಿತ್‌ನ ಸಮಗ್ರ ಕಲಿಕಾ ಕಾರ್ಯಕ್ರಮದಲ್ಲಿ ಸಿರಿಧಾನ್ಯ ವಿಷಯಗಳಲ್ಲಿ ಬೋಧನೆ ಮತ್ತು ಸಾಮಾಗ್ರಿಗಳ ಅಭಿವೃದ್ಧಿಪಡಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ.ವಿದರ ಜತೆಯಲ್ಲಿ ಚಾಮರಾಜನಗರದ ಪ್ರದೇಶಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಸಲು ಮತ್ತು ಸಂಸ್ಕರಣೆಯನ್ನು ಮಾಡುವ ಬಗ್ಗೆ ಪುನರ್ಚಿತ್‌ಗೆ ಸಲಹೆ ನೀಡುತ್ತಿದ್ದಾರೆ.

Siddharth Joshi

Siddharth Joshi

Team member

Holds a bachelor’s degree in mechanical engineering ( IIT Mumbai) and was a fellow at the Indian Institute of Management, Bengaluru. His interests are in contemporary political economy and social change for justice. He works closely with several human rights groups and anchors the climate change data collection and processing for Punarchith.
ಸುಂದ್ರಮ್ಮ

ಸುಂದ್ರಮ್ಮ

ಮುಖ್ಯ ತಂಡ

ಸುಂದ್ರಮ್ಮ ಅವರು ಪುನರ್ಚಿತ್ ತಂಡಕ್ಕೆ ಹೊಸದಾಗಿ ಸೇರಿದ್ದು, ಸಮುದಾಯದ ಚಟುವಟಿಕೆಗಳು ಹಾಗೂ ಔಟ್‌ರೀಚ್ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಅವರು ಪದವಿ ಶಿಕ್ಷಣವನ್ನು ಪಡೆದಿದ್ದು, ಮಹಿಳಾ ಸಮಖ್ಯಾದಲ್ಲಿ ಇಪ್ಪತ್ತು ವರ್ಷಗಳ ಅನುಭವ ಪಡೆದುಕೊಂಡಿದ್ದಾರೆ. ಇವರು ಸೂಕ್ಷ್ಮ ಅವಲೋಕನಕಾರರಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಕಾರ್ಯಾಗಾರಗಳನ್ನು ಮೂಲಕ ಅವರನ್ನು ಮನವೊಲಿಸುವ ಕೆಲಸದಲ್ಲಿ ಖುಷಿಯಾಗಿದ್ದಾರೆ.
ಮಹೇಂದ್ರ .ಎನ್.

ಮಹೇಂದ್ರ .ಎನ್.

ಮುಖ್ಯ ತಂಡ

ಮಹೇಂದ್ರ ಪಿಯುಸಿ ಶಿಕ್ಷಣವನ್ನು ಮುಗಿಸಿದ್ದು, ಪರಿಸರ ಮತ್ತು ಕೃಷಿ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಹೋನ್ನೇರು ಗ್ರಾಮೀಣ ಯುವಜನ ಸಂಘಟ ಸದಸ್ಯನಾಗಿದ್ದು, ಪುನರ್ಚಿತ್ ತಂಡಕ್ಕೆ ಇಂಟರ್ನ್ ಮತ್ತು ತರಬೇತುದಾರನಾಗಿ (ಟ್ರೈನೀಸ್) ಸೇರಿಕೊಂಡಿದ್ದಾರೆ. ಇವರಿಗೆ ಭೂಮಿ ಕೆಲಸ ಮತ್ತು ಛಾಯಚಿತ್ರಗಳನ್ನು ತೆಗೆಯುವಲ್ಲಿ ಖುಷಿಯಿದೆ.
ಶೈಲಾ

ಶೈಲಾ

ಮುಖ್ಯ ತಂಡ

ಶೈಲಾ ಪುನರ್ಚಿತ್ ಕಲಿಕಾ ಕೇಂದ್ರದ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತಿದ್ದು, ರುಚಿಯಾದ ಅಡುಗೆ ಮತ್ತು ತಿಂಡಿ ಮಾಡುವಲ್ಲಿ ಮತ್ತು ಹೊನ್ನೇರಿನ ಆಹಾರ ಪದಾರ್ಥಗಳನ್ನು ಸಿದ್ದಪಡಿಸುವ ತಂಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಚಂದ್ರಕಾಂತ ಬಿ.ಆರ್.

ಚಂದ್ರಕಾಂತ ಬಿ.ಆರ್.

ಮುಖ್ಯ ತಂಡ

ಚಂದ್ರಕಾಂತ ಬಿ.ಆರ್. ಅವರಿಗೆ ಕೃಷಿ, ಸಂಗೀತ ಮತ್ತು ಕಂಪ್ಯೂಟರ್ ಕಲಿಕೆ ಮತ್ತು ಬಳಕೆಯಲ್ಲಿ ಆಸಕ್ತಿ ಇದೆ. ಇವರು ಹೊನ್ನೇರು ಮಾರುಕಟ್ಟೆ ವಿಷಯಗಳ ಸಂಯೋಜಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಹೊನ್ನೇರು ಗ್ರಾಮೀಣ ಉತ್ಪಾದಕರ ಒಕ್ಕೂಟಕ್ಕೆ ನೆರವು ನೀಡುತ್ತಾರೆ. ಮಕ್ಕಳು ಮತ್ತು ತಂಡಕ್ಕೆ ಸಂಗೀತವನ್ನು ಹೇಳಿಕೊಡುತ್ತಾರೆ.