ಪಿ. ವೀರಭದ್ರನಾಯ್ಕ (ಬದ್ರಿ)

ಪಿ. ವೀರಭದ್ರನಾಯ್ಕ (ಬದ್ರಿ) : ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೊತ್ತರ ಪದವಿ, ಮಹಿಳಾ ಅಧ್ಯಯನದಲ್ಲಿ ಡಿಪ್ಲಮೊ ಪದವಿ ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣದಲ್ಲಿ ಕೆಲಸ ಮಾಡಿದ್ದು, ಹಕ್ಕು ಆಧಾರಿತ ಅಭಿವೃದ್ಧಿ ಮತ್ತು ಯುವಜನರನ್ನು ಸಂಘಟಿಸುತ್ತಾರೆ. ಚಾಮರಾಜನಗರ ಜಿಲ್ಲೆಯ ಆಶ್ರಮ ಶಾಲೆಗಳನ್ನು ಕುರಿತು ಆಳವಾದ ಅಧ್ಯಯನ ಮಾಡಿದ್ದು, ಆದಿವಾಸಿ/ಬುಡಕಟ್ಟು ಜನರ ಶಿಕ್ಷಣ ಸುಧಾರಣೆಗೆ ಸಂಬಂಧಿಸಿದಂತೆ ವಕಾಲತ್ತು (ಅಡ್ವಕೆಸಿ) ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಆಸಕ್ತಿ ಕ್ಷೇತ್ರಗಳು ಅಭಿವೃದ್ಧಿಯ ವಿಮರ್ಶೆ, ಗ್ರಾಮೀಣ ಸಮಾಜಶಾಸ್ತ್ರ ಮತ್ತು ಶಿಕ್ಷಣ ಸಂಬಂಧ ಅಧ್ಯಯನಗಳು.ಇವರು ಪುನರ್ಚಿತ್ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದು, ಕೃಷಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಕ್ರಿಯಾ ಸಂಶೋಧನೆ ಮತ್ತು ಸಾರ್ವತ್ರಿಕ ತತ್ವಗಳು / ಭಾವನೆಗೆ ಸಂಬಂಧಿಸಿದ ವಿಷಯದ ಮೇಲೆ ಕೆಲಸ ಮಾಡುತ್ತಾರೆ. ಇವರು ಶಿಕ್ಷಕರ ಸಾಮರ್ಥ್ಯಭಿವೃದ್ಧಿ ಮತ್ತು ಶಿಶುಕೇಂದ್ರಿತ ಕಲಿಕೆ, ಶಾಲೆ ಮತ್ತು ಸಮುದಾಯ ವಿಷಯ ಕುರಿತು ಹಲವಾರು ತರಬೇತಿಗಳನ್ನು ನೀಡಿದ್ದಾರೆ. ಇವರ ಮತ್ತೊಂದು ಆಸಕ್ತಿ ಕ್ಷೇತ್ರ ಕನ್ನಡದಲ್ಲಿ ಕ್ರಿಯಾಶೀಲ ಬರವಣಿಗೆ, ಕಥೆ, ಕವನಗಳು ಮತ್ತು ಲೇಖನಗಳನ್ನು ಬರೆಯುತ್ತಾರೆ. ಕೃಷಿ ಕ್ಷೇತ್ರದಲ್ಲಿ ಬಹಳ ಆಸಕ್ತಿ ಇದ್ದು, ಭೂಮಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಗವಳ್ಳಿಯ ಪುನರ್ಚಿತ್ ಆವರಣದಲ್ಲಿ ಕೈ ತೋಟ ನಿರ್ಮಾಣ ಮಾಡಿದ್ದಾರೆ. ವಿವಿಧ ವಿಷಯಗಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕನ್ನಡ ದಿನ ಪತ್ರಿಕೆಯಲ್ಲಿ ಹಲವಾರು ಲೇಖನಗಳು ಪ್ರಕಟವಾಗಿವೆ. ಪ್ರಸ್ತುತ ಸರ್ಕಾರಿ ಶಾಲೆಗಳ ಸಮಗ್ರ ಅಧ್ಯಯನ ಪುಸ್ತಕದ ಸಂಪಾದಕ ಕೆಲಸ ಮಾಡುತ್ತಿದ್ದು, ಯುವಜನರಿಗಾಗಿ ಬೋಧಿಸಲು ಬೇಕಾದ ಸಾಮಾಜಿಕ ವಿಷಯಗಳ ಕೈಪಿಡಿಯನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಪುಸ್ತಕ ನಿಜರು : ಆದಿವಾಸಿ ಶಿಕ್ಷಣ ಮತ್ತು ಅಭಿವೃದ್ಧಿಯ ಸ್ಥಿತ್ಯಂತರಗಳು ಇದನ್ನು ಮೈಸೂರಿನ ರೂಪ ಪ್ರಕಾಶನದವರು ಪ್ರಕಟಿಸಲಿದ್ದಾರೆ.

ಹೆಚ್ಚಿನ ವಿವರಕ್ಕಾಗಿ ನೋಡಿ

ಪುಸ್ತಕ ಪ್ರಕಟಣೆಗಳು
1. ಮಕ್ಕಳಿಗಾಗಿ ಸ್ಥಳೀಯ ಸೃಜನಾತ್ಮಕ ಚಟುವಟಿಕೆಗಳ ಪುಸ್ತಕಗಳು : (೧) ಚಿಟ್ಟೆ- ಕವನಗಳ ಸಂಗ್ರಹ (೨) ಬಿದಿರು. ವಿದ್ಯಾಂಕುರ-ಬಿಜಿವಿಎಸ್, ೨೦೦೮.
2. ಶಿಕ್ಷಣ ವಂಚಿತ ಬುಡಕಟ್ಟು ಮಕ್ಕಳು. ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೧೦.
3. ದಿ ಎಜುಕೇಷನ್ ಕ್ವಶ್ಚನ್ ಪ್ರಮ್ ದಿ ಪ್ರಸಪೆಕ್ಟಿವ್‌ಸ್ ಆಫ್ ಆದಿವಾಸಿಸ್ : ಕಂಡೀಶನ್ಸ, ಪಾಲೀಸಿಸ್ಸ್ ಅಂಡ್ ಸ್ಟ್ರಕ್ಚರ್‍ಸ್ (ಸಹ ಲೇಖಕರು), ನಿಯಾಸ್ ಬೆಂಗಳೂರು ಮತ್ತು ಯುನೆಸೆಫ್, ಮಾರ್ಚ್ ೨೦೧೨.
4. ಹೊಸ ಗುತ್ತಿಗೆ ವ್ಯವಸಾಯ ಮತ್ತು ಅದರ ಪರಿಣಾಮಗಳು, ಬಿಳಿಗಿರಿ ರಂಗನ ಬೆಟ್ಟದ ಬಫರ್ ಜೋನ್/ವಲಯದ ಸಮಗ್ರ ಅಧ್ಯಯನ. ಪುನರ್ಚಿತ್ ೨೦೦೪.
5. ಸಾಮಾಜಿಕ ತಲ್ಲಣಗಳು ಕಾಳಜಿಗಳು-ಕನಸುಗಳು: ಪ್ರೊ.ಆರ್.ಇಂದಿರಾ ಅವರ ಅಭಿನಂದನ ಪುಸ್ತಕದ ಸಹ ಸಂಪಾದಕರು (ರೂಪ ಪ್ರಕಾಶನ, ಮೈಸೂರು, ೨೦೧೫).

ವರದಿಗಳು :
1. ಎ ಸ್ಟಡೀಸ್ ಆಫ್ ಸೋಲಿಗ ಸಿದ್ಧಿ ಟೆಕ್ಸ್ಟ್ ಬುಕ್ ಅಂಡ್ ಟ್ರೈಬಲ್ ಲಾಂಗ್ವೇಜ್ ವರದಿ ಸಲ್ಲಿಕೆ, ಸರ್ವಶಿಕ್ಷಣ ಅಭಿಯಾನ, ಕರ್ನಾಟಕ ಸರ್ಕಾರ ೨೦೦೫.
2. ಎ ಕೇಸ್ ಸ್ಟಡೀಸ್ ಆಫ್ ಎ ಡಿಸ್‌ಫಂಕ್ಷನಲ್ ಸ್ಕೂಲ್. ವಿದ್ಯಾಂಕುರ ೨೦೦೭.
3. ಡೆವಲಪ್‌ಮೆಂಟ್ ಆಫ್ ಫರ್ಸನಾಲಿಟಿ ಅಂಡ್ ಸ್ಕಿಲ್ಸ್ ಆರ್ ಎ ರಿಪ್ಲೆಕ್ಸಿವ್ ನೋಟ್ ಆನ್ ವರ್ಕಿಂಗ್ ಇನ್ ಡಿಸ್ಟ್ರೀಕ್ಟ್ ಕ್ವಾಲಿಟಿ ಎಜುಕೇಷನ್ ಪ್ರಾಜೆಕ್ಟ್ (ಇನ್‌ಕ್ಲೂಡಿಂಗ್ ಇನ್ ದಿ ಮಿಡ್ ಪ್ರಾಜೆಕ್ಟ್ ರಿಪ್ಲೆಕ್ಸ್ಯೂ ಎಸೇಸ್ ಬಾಟ್ ಔಟ್ ಬೈ ನಿಯಾಸ್, ೨೦೦೬).
4. ಚಾಮರಾಜನಗರ ಜಿಲ್ಲೆಯ ಆಶ್ರಮ ಶಾಲೆಗಳ ಸ್ಥಿತಿಗತಿ (ಸಹ ಲೇಖಕರು) ವರದಿ ಸಲ್ಲಿಕೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ, ೨೦೦೭.
5. ಪುಣಜನೂರು ಪಂಚಾಯಿತಿ ಗ್ರಾಮಗಳ ಸಮಗ್ರ ಅಧ್ಯಯನ ವರದಿ (ಸಹ ಲೇಖಕರು). ಪುನರ್ಚಿತ್, ಏಪ್ರಿಲ್ ೨೦೧೧ ರಿಂದ ಏಪ್ರಿಲ್ ೨೦೧೨.
6. ಪುಣಜನೂರು ಪಂಚಾಯಿತಿ ಗ್ರಾಮಗಳ ಯುವಜನರ ಪರಿಸ್ಥಿತಿ ವಿಶ್ಲೇಷಣಾ ವರದಿ (ಸಹ ಲೇಖಕರು). ಪುನರ್ಚಿತ್,ಏಪ್ರಿಲ್ ೨೦೧೧ ರಿಂದ ಏಪ್ರಿಲ್ ೨೦೧೨.
7. ಲ್ಯಾಂಡ್ ಯೂಸ್ ಅಂಡ್ ಫಾರಮರ್, ಚಾಯ್ಸ್ ಇನ್ ಪುಣಜನೂರ್ ಪಂಚಾಯತ್ ವಿಲೇಜಸ್ ಇನ್ ಚಾಮರಾಜನಗರ. ಪುನರ್ಚಿತ್, ಏಪ್ರಿಲ್, ೨೦೧೨.

ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳು
1. ಶೋಷಣೆಗೆ ಒಳಗಾಗುತ್ತಿರುವ ಬುಡಕಟ್ಟು ಸಂಸ್ಕೃತಿ, ಆಂದೋಲನ ದಿನಪತ್ರಿಕೆ. ಏಪ್ರಿಲ್ ೨೯, ೨೦೧೨.
2. ಶಿಕ್ಷಣ ಕ್ಷೇತ್ರ ಹೊಕ್ಕ ಜಾತೀಕರಣ, ಜಾಗತೀಕರಣ ಮತ್ತು ಖಾಸಗೀಕರ ! ವಿಜಯಕರ್ನಾಟಕ ದಿನಪತ್ರಿಕೆ, ಅಕ್ಟೋಬರ್ ೨೯, ೨೦೧೨.
3. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಆಯ್ಕೆ. ಆಂದೋನಲ ದಿನಪತ್ರಿಕೆ, ಜನವರಿ ೨೫, ೨೦೧೩.
4. ಹೊಸ ಗುತ್ತಿಗೆ ಸುಳಿಯಲ್ಲಿ, ಪ್ರಜಾವಾಣಿ ದಿನಪತ್ರಿಕೆ, ಕೃಷಿ ಕಣಜ, ೨೨ನೇ ಸೆಪ್ಟಂಬರ್ ೨೦೧೭
5. ನಾಡಿನಲ್ಲಿ ಮಳೆಯಾಗುತ್ತಿದೆ ಬರ ದೂರವಾಯಿತೇ (ಸಹ ಲೇಖಕರು). ಪ್ರಜಾವಾಣಿ ದಿನಪತ್ರಿಕೆ, ೨೪ನೇ ಜೂನ್ ೨೦೧೭.
6. ದೇವರ ಹೊಳೆಯೋ ಕೊಳಚೆ ನದಿಯೋ !?, ಲೋಕಧ್ವನಿ ಪತ್ರಿಕೆ, ಸಿರಸಿ, ಉತ್ತರ ಕನ್ನಡ ಜಿಲ್ಲೆ, ಮಾರ್ಚ್ ೨೮, ೨೦೧೭

ಪುನರ್ಚಿತ್ ಸಂಸ್ಥೆಯ ದಿನನಿತ್ಯ ಕಾರ್ಯದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಸಮಗ್ರ ಕಲಿಕಾ ಕಾರ್ಯಕ್ರಮದ ಆಂಕರ್ ಆಗಿ, ಸಾಮಾಜಿಕ ವಿಷಯಗಳು ಮತ್ತು ಕನ್ನಡ ಬರವಣಿಗೆಗಳನ್ನು ಕುರಿತು ಬೋಧನೆ ಮಾಡುತ್ತಾರೆ.ಇವರು ಸಂಪನ್ಮೂಲ ವ್ಯಕ್ತಿಯಾಗಿ ಇತರೆ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ.