ಧರ್ಮದರ್ಶಿಗಳು

ಕೆ.ವೆಂಕಟರಾಜು

ಕೆ.ವೆಂಕಟರಾಜು

ಧರ್ಮದರ್ಶಿಗಳು

ಕೆ.ವೆಂಕಟರಾಜು : ಇವರು ಚಾಮರಾಜನರಗ ನಿವಾಸಿ. ನಿವೃತ್ತ ಸರ್ಕಾರಿ ನೌಕರರು. ಇವರು ರಂಗ ಕಲಾವಿದರಾಗಿದ್ದು ಸ್ಥಳೀಯ ಇತಿಹಾಸದ ಬಗ್ಗೆ ಬಹಳ ವಿಷಯಗಳನ್ನು ತಿಳಿದಿರುವ ಮುಖ್ಯ ವ್ಯಕ್ತಿ. ಇವರು ಸಮಾಜದ ಹಲವಾರು ಚಟುವಟಿಕೆಗಳಲ್ಲಿ ಮತ್ತು ಪ್ರಗತಿಪರ ವಿಷಯಗಳಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಕೈ ಅಂಡ ಐ ಆಂಗ್ಲಭಾಷೆಯ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರ ಮಾಡುತ್ತಿದ್ದು, ರಜನಿ ಭಕ್ಷಿಯವರ ಬಾಪುಕುಟ್ಟಿಯನ್ನು ಅನುವಾದಿಸಿದ್ದಾರೆ.
ಶ್ರೀಮತಿ ಕಲಾ ಸುಂದರ್

ಶ್ರೀಮತಿ ಕಲಾ ಸುಂದರ್

ಧರ್ಮದರ್ಶಿಗಳು

ಶ್ರೀಮತಿ ಕಲಾ ಸುಂದರ್ : ಇವರು ರಷ್ಯಾದ ಮ್ಯಾಸ್ಕೋ ವಿಶ್ವವಿದ್ಯಾಲಯದಿಂದ ರಷಿಯನ್ ಸಾಹಿತ್ಯದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆದಿದ್ದಾರೆ. ಇವರು ಬೆಂಗಳೂರು ನಿವಾಸಿಯಾಗಿದ್ದು, ಹಲವಾರು ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಹೊಸ ಬೋಧನಾ ವಿಧಾನ ಮತ್ತು ಕಲಿಕಾ ಕಾರ್ಯಕ್ರಮದಲ್ಲಿ ಆಸಕ್ತಿ ಇದೆ.ಪುನರ್ಚಿತ್‌ಗೆ ತುಂಬಾ ನೆರವನ್ನು ನೀಡುತ್ತಿದ್ದು, ಶಿಕ್ಷಣದ ಬಗ್ಗೆ ಯಾರೊಬ್ಬರು ನಿರ್ಲಕ್ಷ್ಯ ವಹಿಸದೆ, ಶಿಕ್ಷಣದ ಮೂಲಕ ಯಾವುದಾದರೂ ದಾರಿಯಲ್ಲಿ ತಮ್ಮ ಜೀವನ ಕಂಡುಕೊಳ್ಳಬೇಕು ಎಂಬ ನಂಬಿಕೆ ಹೊಂದಿದ್ದಾರೆ.
 ಸಿ ಬಾಲಚಂದ್ರನ್

ಸಿ ಬಾಲಚಂದ್ರನ್

ಧರ್ಮದರ್ಶಿಗಳು

ಎ.ಆರ್.ವಾಸವಿ

ಎ.ಆರ್.ವಾಸವಿ

ಧರ್ಮದರ್ಶಿಗಳು

ಎ.ಆರ್.ವಾಸವಿ : ಸಾಮಾಜಿಕ ಮಾನವಶಾಸ್ತ್ರಜ್ಞೆ. ಇವರು ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಸಮಾಜಶಾಸ್ತ್ರ ವಿಭಾಗದಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆದಿದ್ದಾರೆ. ಅಮೆರಿಕಾದ ಮೆಚಿಗನ್ ಸ್ಟೇಟ್ ಯುನಿರ್ವಸಿಟಿಯಿಂದ ಸಾಮಾಜಿಕ ಮಾನವಶಾಸ್ತ್ರದಲ್ಲಿ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಪಡೆದಿದ್ದಾರೆ. ಇವರು ಟಪ್ಟ್ಸ್ ಯುನಿರ್ವಸಿಟಿಯಲ್ಲಿ (ಮಾಸ್, ಅಮೆರಿಕಾ) ಸಂದರ್ಶಕ ಪ್ರಾಧ್ಯಾಪಕರು ಮ್ತತು ಅಹಮದಬಾದ್‌ನ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌ನಲ್ಲಿ ಬೋಧಕರಾಗಿದ್ದಾರೆ( ಫ್ಯಾಕಲ್ಟಿ). ವಿಶ್ವದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸವನ್ನು ನೀಡಿದ್ದಾರೆ. ಇವರು ಬೆಂಗಳೂರಿನ ನ್ಯಾಷಿನಲ್ ಇನಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್‌ನ ಸಮಾಜ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದು, ಸ್ವಯಂ ನಿವೃತ್ತಿ ಪಡೆದಿದ್ದಾರೆ.ಇವರು ಪುನರ್ಚಿತ್ ಸಂಸ್ಥೆಯ ಸ್ಥಾಪಕರಾಗಿದ್ದು, ಪ್ರಸ್ತುತ ಕಾರ್ಯದರ್ಶಿಗಳಾಗಿದ್ದಾರೆ. ಅವರ ಆಸಕ್ತಿ ಕ್ಷೇತ್ರಗಳು ಪರ್ಯಾಯ ಶಿಕ್ಷಣ, ಗ್ರಾಮೀಣ ಮತ್ತು ಕೃಷಿ ಅಧ್ಯಯನಗಳು, ಶಿಕ್ಷಣ ಸಮಾಜಶಾಸ್ತ್ರ, ಭಾರತೀಯ ಸಮಾಜಶಾಸ್ತ್ರ ಮತ್ತು ಪ್ರಸ್ತುತದ ಸಾಮಾಜಿಕ ಸಿದ್ಧಾಂತದ ವಿಷಯಗಳು.

ಆಯ್ದ ಪ್ರಕಟಣೆಗಳು
(ಪುಸ್ತಕ ಪ್ರಕಟಣೆಗಳ ವಿವರಕ್ಕಾಗಿ ಲಿಂಕ್ ಮತ್ತು ಪಿಡಿಎಫ್ ನೋಡಿ)

The Absent Agriculturist in International Affairs | Engish PDF
Societies in motion | Engish PDF
Re-imagining education | Engish PDF
‘Social Transformative Learning’ In India | Engish PDF | Kannada PDF
Suicides and the making of India’s agrarian distress | Engish PDF
‘The education question’ from the perspective of adivasis: conditions, policies and structures | Engish PDF